ಭಾನುವಾರ ಸಂಪೂರ್ಣ ಲಾಕ್‌ಡೌನ್ ಇಲ್ಲ | ಎಂದಿನಂತೆ ಅವಕಾಶ | ಸರಕಾರದ ಆದೇಶ

ಬೆಂಗಳೂರು: ಲಾಕ್ ಡೌನ್ 4.0 ಮುಗಿಯಲು ಇನ್ನು ಒಂದೇ ದಿನ ಇರುವಾಗಲೇ ರಾಜ್ಯದಲ್ಲಿ ಲಾಕ್ ಡೌನ್ ನ್ನು ಬಹುತೇಕ ಸಡಿಲಿಕೆ ಮಾಡಲಾಗಿದ್ದು, ಈಗ ರಾಜ್ಯ ಸರಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಜಾರಿಯಲ್ಲಿದ್ದ ಭಾನುವಾರದ ಸಂಪೂರ್ಣ ಲಾಕ್ ಡೌನ್ ನ್ನು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.

ಈ ಹಿನ್ನಲೆ ಭಾನುವಾರ ರಾಜ್ಯದಲ್ಲಿ ಯಾವುದೇ ಸಂಪೂರ್ಣ ಲಾಕ್‍ಡೌನ್ ಇಲ್ಲ. ಎಂದಿನಂತೆ ಎಲ್ಲಾ ಚಟವಟಿಕೆಗಳು ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತವಾಗಿ ಫೊಷಣೆಯಾಗಿದೆ.

ಪ್ರತಿದಿನದಂತೆ ನಾಳೆಯೂ ಬಸ್ ಸಂಚಾರ ಇರಲಿದೆ. ಸರಕಾರಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ.

ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲ್‍ನಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೂ ಪಾರ್ಕ್ ತೆರೆದಿರುತ್ತದೆ. ಜೊತೆಗೆ ಮದ್ಯದಂಗಡಿ ಕೂಡ ಓಪನ್ ಇರುತ್ತದೆ.

Leave A Reply

Your email address will not be published.