ಫರಂಗಿಪೇಟೆ | ವಿದ್ಯುತ್ ಶಾಕ್ ನಿಂದ ಓರ್ವ ಸಾವು; ಮತ್ತೋರ್ವ ಗಂಭೀರ ಗಾಯ

ಬಂಟ್ವಾಳ: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಸಾವನ್ನಪ್ಪಿದ್ದು ಇನ್ನೋರ್ವ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪ ಪೇರಿಮಾರ್ ನಲ್ಲಿ ಶನಿವಾರ ಸಂಭವಿಸಿದೆ.

ಘಟನೆಯಲ್ಲಿ ಮುಬಾರಕ್ ಅಮ್ಮೆಮಾರ್(23) ಮೃತಪಟ್ಟ ಯುವಕ. ಫಾರೂಕ್ ಅಮ್ಮೆಮಾರ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಫರಂಗಿಪೇಟೆಯ ಪೇರಿಮಾರ್ ನಲ್ಲಿ ಕಟ್ಟಡವೊಂದರ ಕೆಲಸ ಮಾಡುತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ

Leave A Reply

Your email address will not be published.