ಕರಾವಳಿಯಲ್ಲಿ ಮುಂದುವರೆದ ಕೊರೊನಾ ಕಾಟ : ದ.ಕ. -14 | ಉಡುಪಿ- 13 ಜನರಲ್ಲಿ ಕೊರೊನಾ ಪತ್ತೆ

ಕರಾವಳಿಯಲ್ಲಿ ಇಂದು ಸಹ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ. ಇಂದಿನ ಹೆಲ್ತ್ ಬುಲೆಟಿನ್ ನ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಉಡುಪಿಯಲ್ಲಿ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಯಲ್ಲಿ ಒಟ್ಟು ಸೋಂಕಿತರರ ಸಂಖ್ಯೆ 111ಕ್ಕೆ ಏರಿಕೆಯಾದ್ರೆ ಉಡುಪಿಯಲ್ಲಿ 177ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿಂದು ಬರೊಬ್ಬರಿ 141 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.