ಎಂ.ಟಿ.ವಿರೇಂದ್ರಕುಮಾರ್ ನಿಧನಕ್ಕೆ ಎಂ.ಬಿ.ಸದಾಶಿವ ಸಂತಾಪ

ವರದಿ : ಹಸೈನಾರ್ ಜಯನಗರ

ಸುಳ್ಯ: ಕೇರಳದ ಹಿರಿಯ ರಾಜಕೀಯ ಸಾಮಾಜಿಕ ನೇತಾರ ಎಂ.ಟಿ. ವಿರೇಂದ್ರ ಕುಮಾರ್ ರವರು ಮೇ 28 ರಂದು ನಿಧನರಾಗಿದ್ದಾರೆ.
ಇವರ ನಿಧನ ಕ್ಕೆ ಕರ್ನಾಟಕ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ ಬಿ ಸದಾಶಿವ ಸಂತಾಪ ಸೂಚಿಸಿದ್ದಾರೆ.

ಕೇರಳ ರಾಜ್ಯ ಸರ್ಕಾರದಲ್ಲಿ ನೀರಾವರಿ ಸಚಿವರಾಗಿ ಹಾಗೂ ಲೋಕಸಭಾ ಸದಸ್ಯ ರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಲೋಕ ತಾಂತ್ರಿಕ್ ಜನತಾ ದಳ ಕೇರಳ ರಾಜ್ಯ ಅಧ್ಯಕ್ಷ ಹಾಗೂ ಕೇರಳದ ಜನಪ್ರಿಯ ಪತ್ರಿಕೆ ಮಾತೃಭೂಮಿ ದಿನ ಪತ್ರಿಕೆ ಯ ಸಂಪಾದಕರಾದ ಎಂ ಟಿ ವಿರೇಂದ್ರ ಕುಮಾರ್ ರವರು ಹೃದಯಾಘಾತ ದಿಂದ ಮೇ 28 ರಂದು ರಾತ್ರಿ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಜೇ ಡಿ ಎಸ್ ಪಕ್ಷದ ನಿಕಟ ಸಂಪರ್ಕದಲ್ಲಿದ್ದು ಜೇ ಡಿ ಎಸ್ ವರಿಷ್ಠರು ಮಾಜಿ ಪ್ರಧಾನಿ ದೇವೇಗೌಡರ ಆಪ್ತರು ಆಗಿದ್ದರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದವರು ಹೇಳಿದರು.

Leave A Reply

Your email address will not be published.