ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪ

ದೆಹಲಿ : ರೋಹ್ಟಕ್ ಹಾಗೂ ಹರಿಯಾಣ ರಾಷ್ಟ್ರ ರಾಜಧಾನಿ ದೆಹಲಿಯಿಂದ 64 ಕಿಲೋಮೀಟರ್ ದೂರದಲ್ಲಿದ್ದು, ಈ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದೆ. ‌ಭೂಕಂಪನವು ನಿನ್ನೆ ರಾತ್ರಿ ಸಂಭವಿಸಿದ್ದು, ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.6 ದಾಖಲಾಗಿದೆ.

ಭೂಮಿ ಕಂಪನದ ಅನುಭವವಾಗುತ್ತಿದ್ದಂತೆ ಮನೆಯೊಳಗಡೆ, ಕಟ್ಟಡದೊಳಗೆ ಇದ್ದವರು ಹೊರಗೆ ಓಡಿ ಬಂದಿದ್ದು, ರಸ್ತೆಗಳು ಹಾಗೂ ಕಟ್ಟಗಳು ಬಿರುಕು ಬಿಟ್ಟಿದೆ. ಕಳೆದೆರಡು ತಿಂಗಳಲ್ಲಿ ದೆಹಲಿಯಲ್ಲಿ 5 ಬಾರಿ ಭೂಕಂಪನ ಸಂಭವಿಸಿದೆ. 4.6ರ ತೀವ್ರತೆ ದಾಖಲಾದ ಕಾರಣ ಈ ಹಿಂದಿನ 4 ಭೂಕಂಪನಗಿಂತ ಹೆಚ್ಚು ತೀವ್ರತೆ ಇದು ಹೊಂದಿದೆ.

ಕೊರೋನಾ ವೈರಸ್‌ನಿಂದ ನಲುಗಿರುವ ದೆಹಲಿ ಜನತೆಗೆ ಇದೀಗ ಭೂಕಂಪನ ಮತ್ತಷ್ಚು ಆತಂಕ ತಂದಿದೆ.

Leave A Reply

Your email address will not be published.