ಬೆಳ್ತಂಗಡಿ ತಾಲೂಕಿನ ಬೆನ್ನುಮುರಿತಕ್ಕೊಳಗಾದವರ ಮನವಿಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜಾ
ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನಲ್ಲಿ ಬೆನ್ನುಮುರಿತಕ್ಕೊಳಗಾದ 65 ದಿವ್ಯಾಂಗರ ಮನೆಗಳನ್ನು ಸೇವಾ ಭಾರತಿ(ರಿ) ಇದರ ಅಧ್ಯಕ್ಷರಾದ ವಿನಾಯಕ ರಾವ್ ಗುರುತಿಸಿ ಬೆಳ್ತಂಗಡಿ ಶಾಸಕರಿಗೆ ಮನವಿ ನೀಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ಸುಮಾರು 1.40 ಲಕ್ಷ ವೆಚ್ಚದಲ್ಲಿ ಔಷಧಿ ಮತ್ತು ದಿನಬಳಕೆಯ ದಿನಸಿ ಕಿಟ್ ಗಳನ್ನು ವಿತರಿಸಲು ಮೇ 30 ರಂದು ಬೆಳಗ್ಗೆ ಧರ್ಮಸ್ಥಳ ಗ್ರಾಮದ ನೀರ ಚಿಲುಮೆಯ ದಿವ್ಯಾಂಗ ಜಗದೀಶ್ ನಾಯ್ಕರ ಮನೆಯಲ್ಲಿ ಇದಕ್ಕೆ ಚಾಲನೆ ನೀಡಿದರು ರಾಜ್ಯದಲ್ಲಿ ಯಾರು ಮಾಡದ ಸಮಾಜಮುಖಿ ಕೆಲಸಕ್ಕೆ ಶಾಸಕರಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಳಿಕ ಮಾತನಾಡಿದ ಶಾಸಕರು ಬೆಳ್ತಂಗಡಿ ತಾಲೂಕಿನ ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾಂಗರಿಗೆ ಸರ್ಕಾರದ ವತಿಯಿಂದ ಎಲ್ಲ ಸವಲತ್ತು ಹಾಗೂ ಅಗತ್ಯನೆರವು ಒದಗಿಸಲು ತಾನು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಇನ್ನೂ ಉಳಿದ ಎಲ್ಲಾ ಮನೆಗಳಿಗೆ 3-4 ದಿನಗಳಲ್ಲಿ ತಲುಪಿಸುವ ಕಾರ್ಯಕ್ಕೆ ಸೇವಾಭಾರತಿ ಕನ್ಯಾಡಿ ಮುಂದಾಗಿದೆ.
ಈ ಒಂದು ಸಂಧರ್ಭದಲ್ಲಿ ಧರ್ಮಸ್ಥಳ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಹರಿದಾಸ್ ಗಾಂಭೀರ್ ನಿರ್ದೇಶಕರಾದ ರತ್ನಾವರ್ಮ ಮತ್ತು ಪ್ರೀತಂ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ರಾವ್ ಮತ್ತು ಸುಧಾಕರ್ ಮೊದಲಾದವರು ಉಪಸ್ಥಿತಿ ಇದ್ದರು.