ವಿಟ್ಲ – ಪುತ್ತೂರು | ಹೋಮ್ ಕ್ವಾರಂಟೈನ್ ನಲ್ಲಿದ್ದ ಪೋಲೀಸರ ವರದಿ ನೆಗೆಟಿವ್

ವಿಟ್ಲ: ಹೋಂ ಕ್ವಾರಂಟೈನ್ ಗೊಳಗಾಗಿದ್ದ ವಿಟ್ಲ ಹಾಗೂ ಪುತ್ತೂರು ಠಾಣೆಯ ಪೋಲೀಸರ ಕೊರೋನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಮುಂಬೈನಿಂದ ಬಂದ ವ್ಯಕ್ತಿಯಿಂದ ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿ ಯೋರ್ವರಿಗೆ ಕೊರೋನಾ ಸೋಂಕು ತಗುಲಿತ್ತು.ಬಳಿಕ ವಿಟ್ಲ ಠಾಣೆಯ ನ್ನು 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು.ಜೊತೆಗೆ ಠಾಣೆಯ ಕರ್ತವ್ಯದಲ್ಲಿದ್ದ ಎಲ್ಲಾ ಪೋಲೀಸರನ್ನು ಹೋಮ್ ಕ್ವಾರಂಟೈನ್ ಮಾಡಿ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ಗೆ ಕಳುಹಿಸಲಾಗಿತ್ತು.

ಇಂದು ಎಲ್ಲಾ ಪೋಲೀಸರ ಕೋವಿಡ್ 19 ವರದಿ ನೆಗೆಟಿವ್ ಬಂದಿರುತ್ತದೆ.ಕೋವಿಡ್ 19 ಪಾಸಿಟಿವ್ ದೃಡಗೊಂಡ ವಿಟ್ಲ ಪೋಲೀಸ್ ಸಿಬ್ಬಂದಿ ಯ ಪತ್ನಿ ಹಾಗೂ ಮಕ್ಕಳ ಗಂಟಲು ದ್ರವಮಾದರಿ ಪರೀಕ್ಷೆ ಗೆ ಕಳುಹಿಸಲಾಗಿತ್ತು.ಅವರ ವರದಿಯೂ ನೆಗೆಟಿವ್ ಬಂದಿದೆ.

ಪೊಲೀಸರ ಸಂಪರ್ಕಕ್ಕೆ ಬಂದಿದ್ದಾರೆಂಬ ನಿಟ್ಟಿನಲ್ಲಿ ವಿಟ್ಲ ನಾಲ್ಕು ಪ್ರಮುಖ ಪತ್ರಿಕೆಯ ಪತ್ರಕರ್ತರ ಗಂಟ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅವರ ವರದಿಯೂ ನೆಗೆಟಿವ್ ಬಂದಿದೆ. ಈ ಮೂಲಕ ವಿಟ್ಲದಲ್ಲಿದ್ದ ಕರೊನಾ ಆತಂಕ ದೂರವಾಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಅದೇರೀತಿ ‌ಹೋಮ್ ಕ್ವಾರಂಟೈನ್ ನಲ್ಲಿದ್ದ ಪುತ್ತೂರು ಪೋಲೀಸರ 6 ಮಂದಿಯ ವರದಿ ಬಂದಿದ್ದು ನೆಗೆಟಿವ್ ಎನ್ನಲಾಗಿದೆ.ಇದರಿಂದ ಈ ಭಾಗದ ಜನರಲ್ಲಿ ಇದ್ದ ಆತಂಕ ಸ್ವಲ್ಪಮಟ್ಟಿಗೆ ಕಡಿಮೆ ಆದಂತಾಗಿದೆ.ಉಳಿದಂತೆ ಇಬ್ಬರು ಸಿಬ್ಬಂದಿ ಗಳ ವರದಿ ಬರಲು ಬಾಕಿಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave A Reply

Your email address will not be published.