ದ.ಕ. ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್

ಕರಾವಳಿ ಜಿಲ್ಲೆಗಳನ್ನು ಕೊರೊನಾ ಸೋಂಕು ನಿರಂತರವಾಗಿ ಕಾಡುತ್ತಲೇ ಇದೆ. ಇಂದೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಉಡುಪಿ ಜಿಲ್ಲೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ದ.ಕ. ಜಿಲ್ಲೆಯ 10 ಕೇಸ್ ಮಹಾರಾಷ್ಟ್ರ ಹಾಗೂ ಇನ್ನೊಂದು ಗುಜರಾತ್ ಮೂಲ‌ ಎಂಬುದು ಮಾಹಿತಿ ತಿಳಿದುಬಂದಿದೆ.

ಇಂದು ರಾಜ್ಯದಲ್ಲಿ ಒಟ್ಟು 122 ಕೊವೀಡ್ -19 ಪ್ರಕರಣಗಳು ಪತ್ತೆಯಾಗಿದೆ. ಇಂದು ಮದ್ಯಾಹ್ನ ರಾಜ್ಯ ಅರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 2405ಕ್ಕೆ ತಲುಪಿದೆ.

Leave A Reply

Your email address will not be published.