ಬೆಳ್ಳಾರೆ | ಪ್ರಾಣದ ಹಂಗನ್ನೆ ತೊರೆದು ಯುವಕನ ರಕ್ಷಣೆಗೆ ದಾವಿಸಿದ ನೇತ್ರಾವತಿ ಹೀರೋಗಳಿಗೆ ಸನ್ಮಾನ

ಈದುಲ್ ಫಿತ್ರ್ ಹಬ್ಬದ ದಿನದಂದು ಬಂಟ್ವಾಳದ ನೇತ್ರಾವತಿ ನದಿಗೆ ಯುವಕನೋರ್ವ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ವಿಚಾರ ತಿಳಿದು ತನ್ನ ಪ್ರಾಣದ ಹಂಗನ್ನೇ ತೊರೆದು ಬಂಟ್ವಾಳ ತಾಲೂಕಿನ 7 ಮಂದಿ ಯುವಕರು, ನದಿಗೆ ಹಾರಿದ ಯುವಕನ ರಕ್ಷಣೆ ಮಾಡುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. ಇವರಿಗೆ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)ಬೆಳ್ಳಾರೆ ,ಎಸ್ಕೆ ಎಸ್ ಎಸ್ ಎಫ್ ಸುಳ್ಯ ವಲಯ ವತಿಯಿಂದ ಅಭಿಮಾನ ಪೂರ್ವ ಕ ಸಮ್ಮಾನ ಕಾರ್ಯಕ್ರಮ ನಡೆಯಿತು.

ನೇತ್ರಾವತಿ ಹೀರೋಗಳಾದ ಆರೀಫ್ , ಝಾಹಿದ್ , ಮುಕ್ತಾರ್ , ಸಮೀರ್ , ತೌಸೀಫ್, ಹಫೀಝ್ ,ಮಹಮ್ಮದ್ ಇವರುಗಳಿಗೆ ಸಮಾಜಸೇವೆ ,ಆಪತ್ಕಾಲದಲ್ಲಿ ಆಪತ್ಬಾಂದವ ಎಂದೆನಿಸಿ,ಸೂರಿಲ್ಲದವರಿಗೆ ಸೂರು ನಿರ್ಮಿಸಿದ ,ಹಲವಾರು ಸಾಧಕರನ್ನು ಗುರುತಿಸಿದ ಹಿರಿಮೆಯುಳ್ಳ ಟ್ರಸ್ಟ್ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಹಾಗೂ ಎಸ್ಕೆ ಎಸ್ ಎಸ್ ಎಫ್ ಸುಳ್ಯ ವಲಯ ವತಿಯಿಂದ ಅಭಿಮಾನ ಪೂರ್ವ ಕವಾಗಿ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿಗಳು , ಟ್ರಸ್ಟ್ ಸದಸ್ಯರು , ಎಸ್ಕೆ ಎಸ್ ಎಸ್ ಎಫ್ ನ ಪದಾಧಿಕಾರಿಗಳು ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.