ಬೆಳ್ತಂಗಡಿಯಲ್ಲಿ ಕೋರೋನಾ ಮಾರಿಗೆ ಮೊದಲ ಬಲಿ

ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಮೂಡುಕೋಡಿ ಪರಿಸರದ ವ್ಯಕ್ತಿಯೊಬ್ಬರು ಮಹಾ ಮಾರಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಇವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಜಿಲ್ಲೆಯ ಕೋವಿಡ್ ಆಸ್ಪತ್ರೆ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೃತಪಟ್ಟ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಆದುದರಿಂದ ಕೊರೂನಾ ಗೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಸಾವು ಆದಂತಾಗಿದೆ.

ಆದ್ರೀಗ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ SARI ಕೇಸ್ ಅಂತ ಪರಿಗಣಿಸಿದೆ.

ಆದರೆ ವ್ಯಕ್ತಿಗೆ ಕೊರೊನಾ ಸೋಂಕು ಯಾವ ಕಾರಣದಿಂದ ಹರಡಿದೆ ಅನ್ನೋದು ಪತ್ತೆಯಾಗಿಲ್ಲ. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದು, ಜಿಲ್ಲಾಡಳಿತ ವ್ಯಕ್ತಿಯ ಮನೆ ಸಮೀಪದ ಪ್ರದೇಶವನ್ನು ಸೀಲ್ ಡೌನ್ ಮಾಡುವ ಸಾಧ್ಯತೆಯಿದೆ. ವ್ಯಕ್ತಿಯ ಸಾವಿನ ಕುರಿತು ಜಿಲ್ಲಾಡಳಿತ ಅಧಿಕೃತ ಘೋಷಣೆ ಇನ್ನಷ್ಟೆ ಮಾಡಬೇಕಿದೆ.

Leave A Reply

Your email address will not be published.