ಕೆದಿಲ ಗಡಿಯಾರದಲ್ಲಿ ಅಕ್ರಮ ಗೋ ಮಾಂಸ ವಶ |ಆರೋಪಿ ಪರಾರಿ |ಕ್ರಮಕ್ಕೆ ಹಿಂ.ಜಾ.ವೇ. ಒತ್ತಾಯ

ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮರಿಯಮ್ಮ ಅವರ ನಿವಾಸದಲ್ಲಿ ಅಕ್ರಮವಾಗಿ ಮಾರುತ್ತಿದ್ದ ಗೋ ಮಾಂಸವನ್ನು ಪುತ್ತೂರು ನಗರ ಠಾಣಾ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಆರೊಪಿ ಅಬೂಬಕ್ಕರ್ ಗಡಿಯಾರ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ.

ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಬೆಳಗ್ಗೆ 7-30 ರ ಅಂದಾಜಿಗೆ ಮರಿಯಮ್ಮ ನಿವಾಸಕ್ಕೆ ಪುತ್ತೂರು ನಗರ ಪೋಲೀಸರ ತಂಡ ದಾಳಿ ನಡೆಸಿದಾಗ ನಿವಾಸದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 40 kg ಯಷ್ಟು ಗೋ ಮಾಂಸ ಸಿಕ್ಕಿರುತ್ತದೆ.ಅಪರಾದಿ ಅಬೂಬಕ್ಕರ್ ಗಡಿಯಾರ ಪೋಲೀಸರನ್ನು ಕಂಡ ತಕ್ಷಣ ಓಡಿ ತಲೆಮರೆಸಿಕೊಂಡಿದ್ದಾನೆ ಅನ್ನಲಾಗಿದೆ.
ಪ್ರಖರಣ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದೆ.

ಅಬೂಬಕ್ಕರ್ ಗಡಿಯಾರ ಅನೇಕ ವರುಷಗಳಿಂದ ಅಕ್ರಮ ಗೋ ಸಾಗಾಟ ಹಾಗು ಅಕ್ರಮ ಕಸಾಯಿಖಾನೆ ನಡೆಸುತ್ತಾ ಬರುತ್ತಿದ್ದು ಜಿಲ್ಲೆಯಾಧ್ಯಂತ ಅನೇಕ ಠಾಣೆಗಳಲ್ಲಿ ಈತನ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಆದರೂ ಮತ್ತೆ ಮತ್ತೆ ಆತ ಈ ಗೋ ಸಾಗಾಟ ಕೃತ್ಯವನ್ನು ಮುಂದುವರಿಸಿದ್ದು ಆತನ ಈ ಕೃತ್ಯವು ಹಿಂದೂಗಳ ನಂಬಿಕೆಗೆ ದಕ್ಕೆ ತರುವಂತಹದ್ದು,ಹಾಗು ಪರೋಕ್ಷವಾಗಿ ಕೋಮು ಗಲಭೆಗೆ ನಾಂದಿಹಾಡುವ ಹುನ್ನಾರ ಆಗಿರುತ್ತದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಅಬೂಬಕ್ಕರ್ ನನ್ನು ರೌಡಿ ಲೀಸ್ಟಿಗೆ ಸೇರಿಸಬೇಕು ಎಂದು ಹಿಂ.ಜಾ.ವೇ ಒತ್ತಾಯಿಸಿದೆ.

Leave A Reply

Your email address will not be published.