ಸುಳ್ಯ | ಮೊಗರ್ಪಣೆ ಎಸ್ಸೆಸ್ಸೆಫ್ ವತಿಯಿಂದ 28ನೇ ವರ್ಷದ ಈದ್ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರ

ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ಕೋವಿಡ್-19 ರ ಲಾಕ್-ಡೌನ್ ಸಂದರ್ಭದಲ್ಲಿ ಹಲವಾರು ಅರ್ಹ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಸ್ಪಂದಿಸಿದ ಈ ಸಂಘಟನೆ ಬಡ ಕುಟುಂಬಗಳಲ್ಲೂ ಈದ್-ದಿನ ಸಂತಸಮಯವಾಗಲಿ ಎಂಬ ನಿಟ್ಟಿನಲ್ಲಿ ಸುಮಾರು 30 ಕುಟುಂಬಗಳಿಗೆ 28ನೇ ವರ್ಷದ ಈದ್ ಕಿಟ್ ವಿತರಣೆ ಮೇ 22ರಂದು ಶಾಖಾ ಅಧ್ಯಕ್ಶರಾದ ಆಸಿಫ್ ಬೆಟ್ಟಂಪಾಡಿ ರವರು ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಎಸ್. ಎಫ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್-ರಹ್ಮಾನ್ ಮೊಗರ್ಪಣೆ, ಜಿಲ್ಲಾ ಸಮಿತಿ ನಾಯಕ ಶೆಮೀರ್ ಮೊಗರ್ಪಣೆ ಶರೀಫ್ ಜಯನಗರ ಉಪಸ್ಥಿತರಿದ್ದರು.

Leave A Reply

Your email address will not be published.