ವಿಟ್ಲ ಸಾಲೆತ್ತೂರು | ಅಕ್ರಮ ಕಸಾಯಿಖಾನೆ | ಓರ್ವನ ಬಂಧನ |ದನದ ಮಾಂಸ,ಚರ್ಮ ವಶಕ್ಕೆ | 7 ದನಗಳ ರಕ್ಷಣೆ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದ ಮಹಿಳೆಯೋರ್ವರ ಹಸು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ದಿನಾಂಕ 21.05.2020 ರಂದು ವಿಟ್ಲ ಸಾಲೆತ್ತೂರು ಎಂಬಲ್ಲಿ ಧಾಳಿ ನಡೆಸಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ಹ್ಯಾರಿಸ್ ಎಂಬಾತನನ್ನು ವಶಕ್ಕೆ ಪಡೆದು ಕಳವುಗೈದ ಹಸು, ಒಂದು ಪಿಕ್ಅಪ್ ವಾಹನ, ಚಾಕು, ಹಗ್ಗ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಹಾರಿಸ್ ನನ್ನು ವಿಚಾರಣೆ ನಡೆಸಲಾಗಿ ಆತ ನೀಡಿದ ಮಾಹಿತಿಯಂತೆ ಸಾಲೆತ್ತೂರು ಗ್ರಾಮದ ಐತಕುಮೇರ್ ನ ಮೊಯ್ದು ಕುಂಞಿ ಎಂಬುವನ ತೋಟದ ಶೆಡ್ ಗೆ ಧಾಳಿ ನಡೆಸಿ ಸ್ಥಳದಿಂದ ಕಡಿಯಲಾಗಿದ್ದ ದನ, ಸುಮಾರು 200 ರಷ್ಟು ದನದ ಚರ್ಮಗಳನ್ನು ಮತ್ತು ದನ ಕಡಿಯಲು ಬಳಸಿದ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಗೊಳಿಸಿರುತ್ತಾರೆ.

ಅಲ್ಲದೇ ಕಡಿಯಲು ಕಟ್ಟಿ ಹಾಕಿದ್ದ 7 ಹಸುಗಳನ್ನು ರಕ್ಷಿಸಿ ಸ್ವಾಧೀನ ಪಡಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

Leave A Reply

Your email address will not be published.