ಹೆತ್ತವರ ತಿರಸ್ಕರಿಸಿ ಜಿಹಾದಿಗಳ ಹಿಂದೆ ಹೋದ ಹಿಂದೂ ಯುವತಿಯ ಭಗ ಭಗ ಉರಿದು ಹೋದ ಬದುಕು !

ಕಣ್ಣೂರ್: ಆಧುನಿಕ ಜಗದ ಯುವ ಜನತೆಯೇ ಹಾಗೆ. ಹೆತ್ತವರು, ಕುಟುಂಬ ಮತ್ತು ಮನೆಯಿಂದ ಹೆಚ್ಚು ತನ್ನ ಗೆಳೆಯರೊಡನೆ ಹೆಚ್ಚು ಕಾಲ ಕಳೆಯುತ್ತಾರೆ. ಹಗಲು-ರಾತ್ರಿಯೆನ್ನದೆ ಶಾಲಾ ಕಾಲೇಜು ಜೀವನದಲ್ಲಿ ಪರಿಚಯವಾದ ಗೆಳೆಯ ಗೆಳತಿಯರೊಡನೆ ಸುತ್ತಾಡುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಹೆಚ್ಚಿನವರು ಗೆಳೆಯರೊಂದಿಗೆ ಸೇರಿ ಜೀವನೋಪಾಯ ಹುಡುಕಿ ತಮ್ಮ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಿದರೆ ಇನ್ನು ಕೆಲವರು ಸದಾಚಾರ ಇಲ್ಲದ ಗೆಳೆಯ-ಗೆಳತಿಯರ ಒಡನಾಟ ಬೆಳೆಸಿ ತಮ್ಮ ಜೀವನಕ್ಕೆ ಹಾಗೂ ಕುಟುಂಬಕ್ಕೆ ಮಾರಕವಾಗಿ ಬಿಡುತ್ತಾರೆ. ಹೀಗೆ ನಕ್ಸಲರು ಹಾಗೂ ಜಿಹಾದಿಗಳ ಹಿಂದೆ ಬಿದ್ದು ತನ್ನ ಜೀವನವನ್ನೇ ನಾಶಗೊಳಿಸಿಕೊಂಡ ಪ್ರತಿಭಾನ್ವಿತ ಹಿಂದೂ ಯುವತಿಯ ಕಥೆಯಿದು.

ನಕ್ಸಲರು ಮತ್ತು ಜಿಹಾದಿಗಳ ಸಹವಾಸಕ್ಕೆ ಬಿದ್ದ ಈ ಹಿಂದೂ ಯುವತಿ ಅವರೊಟ್ಟಿಗೆ ಬದುಕು ರೂಪಿಸಿಕೊಳ್ಳಲು ತನ್ನ ತಂದೆ-ತಾಯಿ, ಸಂಬಂಧಿಕರು ಸೇರಿದಂತೆ ಎಲ್ಲರೊಂದಿಗೂ ಸಂಪರ್ಕ ಕಡಿದುಕೊಂಡಿದ್ದಳು. ಮಗಳನ್ನು ವಾಪಸ್ ಕರೆತರಲು ಆಕೆಯ ತಂದೆ-ತಾಯಿ ಎಷ್ಟೇ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕೋರ್ಟ್‌ನಲ್ಲೂ ಅವಳು, ‘‘ನನಗೆ ಕುಟುಂಬಸ್ಥರ ಜತೆ ಹೋಗಲು ಇಷ್ಟವಿಲ್ಲ, ಸ್ನೇಹಿತರೊಂದಿಗೆ ಇರುತ್ತೇನೆ’’ ಎಂದು ಖಂಡತುಂಡವಾಗಿ ಹೇಳಿದ್ದಳು. ಅಷ್ಟರಮಟ್ಟಿಗೆ ಬದಲಾಗಿದ್ದ ಆ ಯುವತಿ ಮೇ 15 ಆದಿತ್ಯವಾರದಂದು ಗೋವಾದಿಂದ ತನ್ನ ತಾಯಿಗೆ ಕರೆ ಮಾಡಿ, ‘‘ಅಮ್ಮಾ, ನಾನು ಮನೆಗೆ ವಾಪಸ್ ಬರುತ್ತೇನೆ. ದಯವಿಟ್ಟು ಕರೆದುಕೊಂಡು ಹೋಗಿ’’ ಎಂದು ಕಣ್ಣೀರಿಟ್ಟಿದ್ದಳು. ಇವರು ಅವಳಿದ್ದಲ್ಲಿಗೆ ಹೋಗಿ ತಲುಪುವ ಹೊತ್ತಿಗೆ, ಅಂದರೆ ಸೋಮವಾರ (ಮೇ 16) ಆಕೆ ಶವವಾಗಿದ್ದಳು….!

ಹೀಗೆ ದುರಂತ ಅಂತ್ಯ ಕಂಡ ಯುವತಿಯ ಹೆಸರು ಅಂಜನಾ ಹರೀಶ್ ಅಲಿಯಾಸ್ ಚಿನ್ನು ಜುಲ್ಫಿಕರ್. ಕೇರಳದ ಹಿಂದು ಸಂಪ್ರದಾಯಸ್ಥ ಕುಟುಂಬವೊಂದರ ಹುಟ್ಟಿದ ಅಂಜನಾಗೆ ಸಾಹಿತ್ಯದಲ್ಲಿ ಅತೀವ ಆಸಕ್ತಿ. ಕಣ್ಣೂರಿನ ತಲಸ್ಸೇರಿಯ ಸರ್ಕಾರಿ ಬ್ರೆನ್ನನ್ ಕಾಲೇಜಿನಲ್ಲಿ ಮಲಯಾಳಂ ಸಾಹಿತ್ಯದ ಪದವಿ ವಿದ್ಯಾರ್ಥಿನಿಯಾಗಿದ್ದ ಈಕೆ ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಳು.

ಈ ನಡುವೆ ನಗರಪ್ರದೇಶದ ನಕ್ಸಲರು ಮತ್ತು ಜಿಹಾದಿಗಳ ಸಂಪರ್ಕ ಆಕೆಗೆ ಬಂತು. ಆಕೆಗೆ ಒಂದಷ್ಟು ಪ್ರಚಾರ ಸಿಕ್ಕಿತು. ಅವರ ವಿಚಾರಧಾರೆಗಳನ್ನು ಅಪ್ಪಿಕೊಂಡಳು. ಸ್ವಾತಂತ್ರ್ಯ ದ ರುಚಿ ಆಕೆಗೆ ಸಿಕ್ಕಿಬಿಟ್ಟಿತು. ಹಿಂದೆ ಕೇರಳದಲ್ಲಿ ಆಯೋಜಿಸಿದ್ದ ಕಿಸ್ ಆಫ್ ಲವ್ ಎಂಬ ವಿವಾದಾತ್ಮಕ ಅಭಿಯಾನದಲ್ಲೂ ಪಾಲ್ಗೊಂಡಿದ್ದಳು. ಮಗಳು ದಾರಿ ತಪ್ಪುತ್ತಿರುವುದು ಪಾಲಕರಿಗೆ ಅರಿವಾಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಅಷ್ಟೊತ್ತಿಗೆ ಕುಡಿತ, ಮಾದಕ ವ್ಯಸನದ ಚಟವನ್ನೂ ಆಕೆ ಅಂಟಿಸಿಕೊಂಡಿದ್ದಳು. ಮಗಳನ್ನು ಉಳಿಸಿಕೊಳ್ಳಲು ಪಾಲಕರು ಡಿ-ಅಡಿಕ್ಷನ್ ಸೆಂಟರ್‌ಗೂ ಕರೆದೊಯ್ದಿದ್ದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಕಾಲೇಜಿನ ಕೊನೆಯ ದಿನದಿಂದ ಅಂಜನಾ ನಾಪತ್ತೆಯಾಗಿದ್ದಳು. ಅವಳ ಅಜ್ಜಿಯೇ ಆಕೆಯನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾಳೆಂದು ಅಂಜನಾಳ ಗೆಳೆಯ/ಗೆಳತಿಯರು ಆರೋಪಿಸಿದ್ದರು. ಅಜ್ಜಿಯ ಮನೆಗೆ ಕಲ್ಲು ಎಸೆದು ಗಲಾಟೆ ಮಾಡಿದ್ದರು. ನಂತರ, ಮಗಳು ನಾಪತ್ತೆಯಾಗಿದ್ದಾಳೆ ಎಂದು ಅಂಜನಾಳ ತಾಯಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು.

ನಕ್ಸಲೈಟ್ ನಾಯಕಿ ಅಜಿತಾಳ ಪುತ್ರಿ ಗಾರ್ಗಿಯ ಮನೆಯಲ್ಲಿ ಅಂಜನಾ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ‘‘ನಾನು ತಾಯಿಯ ಜತೆ ಹೋಗುವುದಿಲ್ಲ. ಗೆಳತಿ ಗಾರ್ಗಿಯ ಜತೆಗೇ ಇರುತ್ತೇನೆ’’ ಎಂದು ಅಂಜನಾ ವಾದಿಸಿದಳು. ಆಗ ಆಕೆಗೆ ವಯಸ್ಸು 22. ವಯಸ್ಸು ಹದಿನೆಂಟು ಆದ ಮೇಲೆ ಬ್ರಹ್ಮ ಬಂದು ಹೇಳಿದರೂ ಕೋರ್ಟ್ ಅವರ ಮಾತು ಕೇಳುವುದಿಲ್ಲ. ಅದು ಯಾವತ್ತೂ ಪೋಷಕರ ಪರ ನಿಲ್ಲುವುದಿಲ್ಲ. ಅವಳೇನು ಅಪ್ರಾಪ್ತ ವಯಸ್ಕಳಲ್ಲ. ಆದ್ದರಿಂದ ಕೋರ್ಟ್ ಕೂಡ ಇದಕ್ಕೆ ಸಮ್ಮತಿಸಿತು. ಅಲ್ಲಿಂದಾಚೆಗೆ ಕುಟುಂಬಸ್ಥರ ಸಂಪರ್ಕದಿಂದ ದೂರವೇ ಹೋಗಿಬಿಟ್ಟಳು ಅಂಜನಾ. ಹಾಗಾಗಿ ಅವಳ ಜೀವನದಲ್ಲಿ ಏನಾಗುತ್ತಿದೆ ಎಂಬ ಯಾವ ಮಾಹಿತಿಯೂ ಮನೆಯವರಿಗೆ ಸಿಗುತ್ತಿರಲಿಲ್ಲ.

ಮಾ. 17ರಂದು ಸ್ನೇಹಿತರೊಂದಿಗೆ ಅಂಜನಾ ಗೋವಾ ಪ್ರವಾಸಕ್ಕೆ ಹೋಗಿದ್ದಳು. ಇದ್ದಕ್ಕಿದ್ದಂತೆ ಮೇ 15 ರಂದು ಸಂಬಂಧಿಕರಿಗೆ ಮತ್ತು ತಾಯಿಗೆ ಕರೆ ಮಾಡಿದ ಅಂಜನಾ, ‘‘ನಾನು ನಂಬಿದ್ದ ಸ್ನೇಹಿತರೆಲ್ಲರೂ ದ್ರೋಹಿಗಳು. ನನ್ನನ್ನು ದಯವಿಟ್ಟು ಮನೆಗೆ ಕರೆದುಕೊಂಡು ಹೋಗಿ’’ ಎಂದು ಬೇಡಿಕೊಂಡಳು. ಮಗಳನ್ನು ಕರೆತರಲು ಹಾತೊರೆದ ತಾಯಿ, ಪೊಲೀಸರಿಗೆ ವಿಷಯ ತಿಳಿಸಿದರು. ಅಂಜನಾ ತಂಗಿದ್ದ ಹೋಟೆಲ್​ಗೆ ಪೊಲೀಸರು ಭೇಟಿ ನೀಡಿದಾಗ ಅಂಜನಾ ಆಗಲೇ ಶವವಾಗಿದ್ದಳು.

ಪ್ರೀತಿಯ ಬಲೆಯಲ್ಲಿ ಅಂಜನಾಳನ್ನು ಬೀಳಿಸಿಕೊಂಡಿದ್ದ ಜಿಹಾದಿಯು ಆಕೆಯ ಹೆಸರನ್ನು ಚಿನ್ನು ಜುಲ್ಫಿಕರ್ ಎಂದು ಬದಲಾಯಿಸಿದ್ದ ಎಂಬುದು ಮಗಳ ಸಾವಿನ ಬಳಿಕ ಪಾಲಕರಿಗೆ ತಿಳಿಯಿತು. ಪ್ರೀತಿಯ ಹೆಸರಲ್ಲಿ ಮೋಸ ಹೋದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸ್ನೇಹಿತರು ತಿಳಿಸಿದ್ದಾರೆ.

ಜಿಹಾದಿಗಳು ಪ್ರೀತಿ ಹೆಸರಲ್ಲಿ ಹಿಂದೂ ಯುವತಿಯರನ್ನು ಮಾನಸಿಕವಾಗಿ ಯಾಮಾರಿಸಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಇಂತಹ ಕೂಪಕ್ಕೆ ಬೀಳದಂತೆ ಹಿಂದೂಗಳು ತಮ್ಮ ಮಕ್ಕಳನ್ನು ಬೆಳೆಸಬೇಕು ಎಂದು ಹಿಂದೂ ಐಕ್ಯ ವೇದಿ ಸಂಘಟನೆಯ ನಾಯಕಿ ಶಶಿಕಲಾ ಟೀಚರ್ ಅಭಿಪ್ರಾಯ ಪಟ್ಟಿದ್ದಾರೆ. ನಗರ ನಕ್ಸಲರಿಗೆ ಮತ್ತು ಜಿಹಾದಿಗಳಿಗೆ ಪೋಷಕರ ಮಾತು ಕೇಳದ ಹೆಣ್ಣು ಜೀವವೊಂದು ಸಾಧನೆ, ಸ್ವಾತಂತ್ರ್ಯದ ಹೆಸರಿನಲ್ಲಿ ಬಲಿಯಾಗಿದೆ.

Leave A Reply

Your email address will not be published.