ಸುಳ್ಯ | ರಂಜಾನ್ ಹಬ್ಬದ ಗ್ರಾಹಕರು ಗಳಿಲ್ಲದೆ ಮಂಕಾಗಿರುವ ಸುಳ್ಯದ ಬಟ್ಟೆ ಹಾಗೂ ಫೂಟ್ ವೇರ್ ಅಂಗಡಿಗಳು

ವರದಿ : ಹಸೈನಾರ್ ಜಯನಗರ
ಕೊರೋನ ವೈರಸ್ ಹಿನ್ನೆಲೆಯಲ್ಲಿ ಆತಂಕದಲ್ಲಿ ಇದರ, ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಮುಸಲ್ಮಾನ ಬಾಂಧವರು ಈ ಬಾರಿಯ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿ ಕೊಳ್ಳುವ ಉದ್ದೇಶದಿಂದ ಯಾವುದೇ ರೀತಿಯ ಹೊಸ ಉಡುಪುಗಳನ್ನು ಧರಿಸದೆ ಸರಳತೆಯಿಂದ ಆಚರಿಸಲು ನಿರ್ಧರಿಸಿದಂತಿದೆ. ಇದೇ ಕಾರಣದಿಂದ ಸುಳ್ಯದ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಬಟ್ಟೆ ಹಾಗೂ ಫೂಟ್ ವೇರ್ ಅಂಗಡಿಗಳಲ್ಲಿ ಮುಸಲ್ಮಾನ ಗ್ರಾಹಕರುಗಳಿಲ್ಲದೆ ವ್ಯಾಪಾರ ವಹಿವಾಟುಗಳು ಮಂಕಾಗಿರುವಂತೆ ಕಂಡುಬರುತ್ತಿದೆ.
ರಂಜಾನ್ ತಿಂಗಳ ಪ್ರಾರಂಭದಿಂದಲೇ ಲಾಕ್ಡೌನ್ ಆದ ಕಾರಣದಿಂದ ಸುಳ್ಯ ಗಾಂಧಿನಗರ ಹಾಗೂ ಕೆಳಗಿನಪೇಟೆ ಕೆಲವು ಕಡೆಗಳಲ್ಲಿ ಭರ್ಜರಿ ಸಮೋಸಗಳ ವ್ಯಾಪಾರಗಳು ಈ ಬಾರಿ ಕಂಡುಬರಲಿಲ್ಲ. ರಂಜಾನ್ ವೃತಾಚರಣೆ ಯಲ್ಲಿ ಸಮೋಸ ಮುಖ್ಯ ಖಾದ್ಯವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿಯ ರಂಜಾನ್ ಆಚರಣೆ ಮಸೀದಿಗಳಲ್ಲಿ ನಮಾಝ್ ಗಳು ಪ್ರಾರ್ಥನೆಗಳು ಇಲ್ಲದೆ ಮೌನವಾಗಿ ಕಳೆದದ್ದು ಮುಸಲ್ಮಾನ ಬಾಂಧವರಲ್ಲಿ ನೋವುಂಟು ಮಾಡಿದೆ. ತನ್ನ ಇಡೀ ಒಂದು ವರ್ಷದ ಕೆಲಸಕಾರ್ಯಗಳಲ್ಲಿ ಬಿಡುವನ್ನು ನೀಡಿ ದೇವರ ಬಳಿ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವ ಉತ್ತಮ ಸಮಯ ಮುಸಲ್ಮಾನರ ಪಾಲಿಗೆ ರಂಜಾನ್ ತಿಂಗಳು ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈರಸ್ ನ ನಿಯಂತ್ರಣ ಹಾಗೂ ಸಮಾಜದ ಒಳಿತಿಗಾಗಿ ಈ ಒಂದು ತ್ಯಾಗವನ್ನು ಮುಸಲ್ಮಾನ ಬಾಂಧವರು ಮಾಡಿದಂತೆ ಗೋಚರಿಸುತ್ತಿದೆ.


ರಂಜಾನ್ ನಲ್ಲಿ ಮುಖ್ಯವಾಗಿ ದಾನ ಧರ್ಮಗಳ ಬಗ್ಗೆ ಹೆಚ್ಚು ಮಹತ್ವ ನೀಡುವಂಥದ್ದು. ಆದರೆ ಈ ಬಾರಿಯ ರಂಜಾನ್ ತಿಂಗಳು ಹಲವಾರು ಬಡವರಿಗೆ ಹಾಗೂ ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಹಲ್ಲಿಂ ಹಾಗೂ ಮಸ್ಜಿದ್ ಖತೀಬರುಗಳು ಈ ಒಂದು ಸಹಾಯ ಪಡೆಯುವಲ್ಲಿ ವಿಫಲರಾಗಿರುತ್ತಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಪವಿತ್ರ ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯನ್ನು ನೀಡಿದ್ದರು ,ತಿಂಗಳ ಕೊನೆಯ ಗಳಿಗೆಯಲ್ಲಿ ಅವರಿಗೆ ಹಣದ ರೂಪದಲ್ಲಿ ಸಿಗುವ ಸಹಾಯಗಳು ಕಡಿಮೆಯಾದ ಘಟನೆಗಳು ನಡೆದಿದೆ. ಒಟ್ಟಿನಲ್ಲಿ ಈ ಒಂದು ಕೊರೋಣ ಮಹಾಮಾರಿಯು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿಸಿರುವುದಂತೂ ದುರ್ಭಾಗ್ಯ ವೇ ಸರಿ. ಈ ಒಂದು ಸಮಸ್ಯೆಯು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲಾ ಧರ್ಮಗಳಲ್ಲಿಯೂ ಈ ರೀತಿಯ ಸಮಸ್ಯೆಗಳು ಮತ್ತು ತಮ್ಮ ತಮ್ಮ ಆರಾಧನಾಲಯಗಳನ್ನು ತೆರೆಯದೆ ಪೂಜಿಸಲು ಸಾಧ್ಯವಾಗದೇ ಇರುವುದು ಇಡೀ ಮನುಷ್ಯ ಕುಲವನ್ನು ದುಃಖದ ಮಡಿಲಿಗೆ ಸೇರಿಸಿದಂತಾಗಿದೆ. ಈ ಒಂದು ಮಹಾಮಾರಿ ವೈರಸ್ ಇಡೀ ವಿಶ್ವ ದಿಂದಲೇ ತೊಲಗಿ ಮತ್ತೊಮ್ಮೆ ಮಂದಿರ ಮಸೀದಿ ಚರ್ಚುಗಳ ದ್ವಾರಗಳು ತೆರೆದು ಪೂಜಿಸಲು ಹಾಗೂ ಪ್ರಾರ್ಥಿಸುವ ಸುಸಂದರ್ಭ ಬಂದೊದಗಲಿ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿರುವ ಪ್ರಾರ್ಥನೆಯಾಗಿದೆ.

Leave A Reply

Your email address will not be published.