ಅರಿಯಡ್ಕ | ಶೇಖಮಲೆ ಶಾಲಾ ಆವರಣದ ಮರ ಕಡಿದ ಪ್ರಕರಣ | ಇಬ್ಬರ ಬಂಧನ

Share the Article

ಪುತ್ತೂರು: ಪಾಣಾಜೆ ವಲಯ ಅರಣ್ಯ ವ್ಯಾಪ್ತಿಯ ಶೇಕಮಲೆ ಸರಕಾರಿ ಹಿ.ಪ್ರಾ.ಶಾಲೆಯ ಖಾಸಗಿ ಸ್ಥಳದಿಂದ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಶೇಖಮಲೆ ಶಾಲೆಯ ಹಿಂದುಗಡೆ ಇದ್ದ ದೂಪದ ಮರ, ಗಾಳಿ ಮರ ಹಾಗೂ ಕಟ್ಟಿಗೆ ಮರಗಳನ್ನು ಕಡಿದು ಕೊಂಡೊಯ್ದ ಬಗ್ಗೆ ಸ್ಥಳೀಯರು ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಮರ ಕಡಿದ ಅರೋಪಿಗಳಾದ ಸೀತಾರಾಮ ಹಾಗೂ ಅಶೋಕ ಎಂಬವರನ್ನು ಬಂಧಿಸಿದ್ದಾರೆ.

ಇವರಿಂದ ವಶಕ್ಕೆ ಪಡೆದ ಮರದ ಒಟ್ಟು ಮೌಲ್ಯ ರೂ.3030 ಅಂದಾಜಿಸಲಾಗಿದೆ. ಕಾರ್ಯಾಚರಣೆಯು ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದರು

Leave A Reply

Your email address will not be published.