ಗ್ರೀನ್ ಝೋನ್ ಆಗಿದ್ದ ಕೊಡಗಿನಲ್ಲಿ ಮತ್ತೆ ಕೊರೊನಾ ಪಾಸಿಟಿವ್

ಗ್ರೀನ್ ಝೋನ್ ಕೊಡಗಿಗೂ ಕೊರೊನಾ‌ ಅಪ್ಪಳಿಸಿದೆ.ಮುಂಬೈಯಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಮೇ. 16 ರಂದು ಮುಂಬೈನಿಂದ -ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಮುಂಬೈನಿಂದ ಸಂಪಾಜೆ ಚೆಕ್‌ಪೋಸ್ಟ್ ಮೂಲಕ ಬಂದಿದ್ದಾರೆ. ಮುಂಬೈನಿಂದ ಬಂದ ಕಾರಣಕ್ಕೆ ಜಿಲ್ಲಾಡಳಿತ ಮಹಿಳೆಯನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿತ್ತು. ಬಳಿಕ ವೈದ್ಯರು ‌ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ನಿನ್ನೆ ರಾತ್ರಿ ಬಂದಿರುವ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಒಂದು ಇದ್ದ ಕೇಸ್ ಸಂಪೂರ್ಣ ಗುಣಮುಖರಾಗಿ ಹಸಿರು ವಲಯವಾಗಿದ್ದ ಕೊಡಗಿನಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

Leave A Reply

Your email address will not be published.