ದ.ಕ-ಉಡುಪಿ ಸೇರಿ ರಾಜ್ಯಾದ್ಯಂತ ವ್ಯಾಪಕ ಮಳೆ | ಕಟಪಾಡಿಯಲ್ಲಿ ಸಿಡಿಲಿಗೆ ಓರ್ವ ಬಲಿ

ದ.ಕ/ಉಡುಪಿ: ರಾಜ್ಯಾದ್ಯಂತ ರವಿವಾರ ಮಳೆರಾಯನದೇ ಅಬ್ಬರ. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಉಬ್ಬರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಒಳ್ಳೆಯ ಮಳೆಯಾಗುತ್ತಿದೆ.
ಕೋರೋನಾ ಬೇಸರದ ನಡುವೆಯೂ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಒಳ್ಳೆಯ ಮಳೆ. ಮುಖ್ಯವಾಗಿ ಕೃಷಿಕವರ್ಗದ ಮೊಗದಲ್ಲಿ ನಗೆ.

ಆದರೆ ಈ ನೆಮ್ಮದಿಯ ಮಳೆಯ ಮಧ್ಯೆಯೇ ಯುವಕನೊಬ್ಬ ಸಿಡಿಲಿನ ಆಘಾತಕ್ಕೆ ಮೃತಪಟ್ಟ ಕಹಿ ಘಟನೆ ವರದಿಯಾಗಿದೆ.

ಮಣಿಪಾಲದಲ್ಲಿ ಆಟೋಮೊಬೈಲ್‌ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ಕಟಪಾಡಿ ಪಡುಏಣಗುಡ್ಡೆ ನಿವಾಸಿ ಸುರೇಶ್‌ ಕರ್ಕೇರ ಅವರ ಪುತ್ರ ಭರತ್‌ ಕುಮಾರ್‌ (21) ಮೃತ ಪಟ್ಟವರು. ಮೃತಪಟ್ಟ ಯುವಕ ಹೆತ್ತವರು ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಂಜೆ ಸಾಧಾರಣ ಮಳೆ ಸುರಿದಿದೆ. ಕಾರ್ಕಳ, ಕುಂದಾಪುರದಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ ಪ್ರದೇಶದಲ್ಲಿ ಗಾಳಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡದ ಪರಿಣಾಮ ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ಕರಾವಳಿ ಭಾಗದಲ್ಲಿ ಮೇ 19 ರ ಬೆಳಗ್ಗೆ 8 ಗಂಟೆಯವರೆಗೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

Leave A Reply

Your email address will not be published.