ಲಾಕ್ ಡೌನ್ ಮೇ 31 ವರೆಗೆ ಮತ್ತೆ ವಿಸ್ತರಣೆ | ಕೇಂದ್ರದಿಂದ ಮಾರ್ಗ ಸೂಚಿ 4.0 ಪ್ರಕಟ
ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಸದ್ಯ ಇರುವ ಲಾಕ್ಡೌನ್ ಅವಧಿಯನ್ನು ಇನ್ನೂ ಎರಡುವಾರಗಳ ಕಾಲ ಅಂದರೆ ಮೇ 31ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಲಾಕ್ಡೌನ್ 4.0 ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ. ಹಲವು ಸಡಿಲಿಕೆಗಳಾಗಲಿವೆ, ಸಾರ್ವಜನಿಕ ಸಾರಿಗೆಗಳಿಗೆ ಅವಕಾಶ ಸಿಗಲಿದೆ, ರೆಸ್ಟೋರೆಂಟ್, ಶಾಪಿಂಗ್ ಮಾಲ್ಗಳು ಮತ್ತೆ ತೆರೆಯಲಿವೆ ಎಂಬ ಹತ್ತುಹಲವು ಚರ್ಚೆಗಳಿಗೆ ಕೇಂದ್ರ ಗೃಹ ಸಚಿವಾಲಯ ಇಂದು ತೆರೆ ಎಳೆದಿದೆ.
ದೇಶದಲ್ಲಿ ಕೊವಿಡ್-19 ತಡೆಗಟ್ಟಲು ಇನ್ನೂ ಹೆಚ್ಚಿನ ನಿಯಂತ್ರಣಾ ಕ್ರಮಗಳು ಅಗತ್ಯ ಇರುವ ಕಾರಣ ಲಾಕ್ಡೌನ್ ಅವಧಿ ವಿಸ್ತರಣೆ ಮಾಡಲಾಗಿದ್ದು, ಎಲ್ಲ ರಾಜ್ಯಸರ್ಕಾರಗಳಿಗೂ ಸೂಚನೆ ನೀಡಲಾಗಿದೆ.ಉನ್ನತ ವಿಪತ್ತು ನಿರ್ವಹಣಾ ಸಂಸ್ಥೆಯಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗೃಹ ಸಚಿವಾಲಯಕ್ಕೆ ನೀಡಿದ ಶಿಫಾರಸ್ಸಿನ ಮೇರೆಗೆ ಈ ಆದೇಶ ಪ್ರಕಟಿಸಲಾಗಿದೆ.
*ಉದ್ಯೋಗಿಗಳು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ
- ಈ ಹಿಂದಿನಂತೆ ಅವಶ್ಯಕ ವಸ್ತುಗಳು ದೊರೆಯಲಿವೆ.
- ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಜಿಮ್, ಚಿತ್ರಮಂದಿರ ಬಂದ್ ಮುಂದುವರಿಕೆ.
- ಅಂತರ್ ರಾಜ್ಯ ಬಸ್ ಸಂಚಾರದ ಕುರಿತು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು.
- ಡೊಮೆಸ್ಟಿಕ್ ಮೆಡಿಕಲ್ ಸರ್ವಿಸ್ ಹೊರತುಪಡಿಸಿ ಯಾವುದೇ ರೀತಿಯ ಡೊಮೆಸ್ಟಿಕ್ ಹಾಗೂ ವಿದೇಶಿ ಪ್ರಯಾಣ ಇರುವುದಿಲ್ಲ.
- ದೇಶಾದ್ಯಂತ ಮೆಟ್ರೋ ರೈಲು ಸೇವೆ ಇರುವುದಿಲ್ಲ
- ಶಾಲೆ-ಕಾಲೇಜು, ತರಬೇತಿ ಕೇಂದ್ರ, ಕೋಚಿಂಗ್ ಇನ್ಸ್ಟ್ಯೂಟ್ಸ್ ಈ ಹಿಂದಿನಂತೆ ಬಂದ್ ಇರಲಿವೆ. (ಆನ್ಲೈನ್ ಟೀಚಿಂಗ್ಗೆ ಅನುಮತಿ.)
- ಹೋಟೆಲ್, ರೆಸ್ಟೋರೆಂಟ್ ಮತ್ತೆ ಲಾಡ್ಜಿಂಗ್ ಎಲ್ಲವೂ ಬಂದ್( ಹೋಮ್ ಡೆಲಿವರಿಗೆ ಅನುಮತಿ ಇದೆ)
- ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಸ್ಟೇಡಿಯಂ, ಚಿತ್ರಮಂದಿರ, ಮಾಲ್, ಸ್ವಿಮ್ಮಿಂಗ್ ಪೂಲ್ಸ್, ಜಿಮ್ ಬಾರ್ ಮತ್ತು ಅಡಿಟೋರಿಯಂಗಳು, ಅಸೆಂಬ್ಲಿ ಹಾಲ್ಗಳು ಬಂದ್,
- ಎಲ್ಲಾ ರೀತಿಯ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಸೇರಿದಂತೆ ಹೆಚ್ಚು ಜನರು ಸೇರುವ ಫಂಕ್ಷನ್ಗಳನ್ನು ಮಾಡುವಂತಿಲ್ಲ.
- ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದು ನಿಷೇಧಿಸಲಾಗಿದೆ.
- ಪ್ರಾರ್ಥನಾ ಮಂದಿರಗಳಲ್ಲಿ ಧಾರ್ಮಿಕ ಸಭೆ ಮಾಡುವಂತಿಲ್ಲ