ದ.ಕ ಜಿಲ್ಲೆಯಲ್ಲಿ ನಿನ್ನೆಯ 167 ವರದಿ ನೆಗೆಟಿವ್​​​​ | ಮತ್ತೆ 77 ಮಂದಿ ಸ್ಯಾಂಪಲ್​​​​ ಇಂದು ನಿರೀಕ್ಷೆ

ದಕ್ಷಿಣ ಕನ್ನಡದಲ್ಲಿ ನಿನ್ನೆ 167 ಮಂದಿಯ ಗಂಟಲು ದ್ರವದ ವರದಿ ಬಂದಿದ್ದು, ಅದರಲ್ಲಿ ಎಲ್ಲ 167 ಮಂದಿಯ ವರದಿ ನೆಗೆಟಿವ್ ಬಂದಿದ್ದು ಒಂದಷ್ಟು ಸಮಾಧಾನಕರ ಅಂಶವಾಗಿದೆ. ನಿನ್ನೆ ಮತ್ತೆ 77 ಗಂಟಲ ಮಾದರಿಗಳನ್ನು ಕಳುಹಿಸಿಕೊಡಲಾಗಿದೆ. ಅದರ ಫಲಿತಾಂಶ ಇಂದು ಬರುವುದರಲ್ಲಿದೆ.

ಇಲ್ಲಿವರೆಗೆ ಒಟ್ಟು 4,892 ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ 4,842 ನೆಗೆಟಿವ್, 50 ಪಾಸಿಟಿವ್ ಬಂದಿದೆ. ಇದರಲ್ಲಿ 16 ಮಂದಿ ಗುಣಮುಖರಾಗಿದ್ದು , 5 ಮಂದಿ ಸಾವನ್ನಪ್ಪಿದ್ದಾರೆ.

ಈವರೆಗೆ 41,247 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ.

ಮಂಗಳೂರಿನ ಎನ್ ಐ ಟಿ ಕೆ ಯಲ್ಲಿ 30 ಮಂದಿ ಮತ್ತು ಇಎಸ್ಐ ಆಸ್ಪತ್ರೆಯಲ್ಲಿ 10 ಮಂದಿ ಕ್ವಾರಂಟೈನ್ ನಲ್ಲಿ ಇದ್ದಾರೆ. 

ದಕ್ಷಿಣ ಕನ್ನಡದಲ್ಲಿ ಈಗ ಇರುವ ಒಟ್ಟು ಆಕ್ಟಿವ್ ಕೇಸುಗಳು 29 ಮಂದಿ. ಅವರು ಮಂಗಳೂರಿನ  ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave A Reply

Your email address will not be published.