ಕೋವಿಡ್ ವಾರಿಯರ್ಸ್ ಗಳಾಗಿದ್ದಾರೆ ಸುಳ್ಯದ ಈ ದಂಪತಿ, ಮತ್ತಿಬ್ಬರು ನಮ್ಮೂರ ಭಗಿನಿಯರು

ವರದಿ: ಪ್ರಸಾದ್ ಕೋಲ್ಚಾರ್.

ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿತರನ್ನು ಶುಶ್ರೂಷೆ ಮಾಡುತ್ತಾ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ವೈದ್ಯ ಸಿಬ್ಬಂದಿಗಳು. ಜಿಲ್ಲೆಯ ವೆನ್ ಲಾಕ್ ಕೋವಿಡ್-19 ಆಸ್ಪತ್ರೆಯಲ್ಲಿ ಹಲವು ಮಂದಿ‌ ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಅವಿರತ ಶ್ರಮ‌ನಡೆಸುತ್ತಿದ್ದಾರೆ. ಅಂತವರ ಪೈಕಿ ಸುಳ್ಯದ ಈ ದಂಪತಿ ಕೂಡಾ ಕರ್ತವ್ಯ ನಿರ್ವಹಿಸುತ್ತಾ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.

ರೀನಾ ಲೋಕೇಶ್
ಲೋಕೇಶ್ ಕಿರಿಭಾಗ

ತಾಲೂಕಿನ ಬಾಳುಗೋಡು ಗ್ರಾಮದ ಕಿರಿಭಾಗದವರಾದ ಲೋಕೇಶ್ ಕಿರಿಭಾಗ ಹಾಗೂ ರೀನಾ ಲೋಕೇಶ್ ಕೋವಿಡ್-19 ವಾರ್ಡ್ ನಲ್ಲಿ ಕಳೆದ ಮೂರು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸೋಂಕಿತರ ಮೇಲುಸ್ತುವಾರಿ ಹಾಗೂ ಈ ರೋಗ ನಿರ್ವಹಣೆಯ ಮಹತ್ತರ ಜವಾಬ್ದಾರಿ ಹೊತ್ತಿರುವ ಇವರು ಕೋವಿಡ್ ನಿರ್ವಹಣೆಗಾಗಿಯೇ ವೆನ್ ಲಾಕ್ ಆಸ್ಪತ್ರೆಗೆ ಕರ್ತವ್ಯಕ್ಕೆ ಸೇರಿದ್ದಾರೆ.

ಲಾವಣ್ಯ

ಪ್ರತೀದಿನದ ಅಪ್ಡೇಟ್ ಹಾಗೂ ರೋಗಿಗಳ‌ ನಿರ್ವಹಣೆಯ ಜವಾಬ್ದಾರಿಯನ್ನು ಆಸ್ಥೆಯಿಂದ ನಿರ್ವಹಿಸುತ್ತಿರುವ ಲೋಕೇಶ್ ಹಾಗೂ ರೀನಾ ದಂಪತಿಗಳಿಬ್ಬರೂ ವಿವಿಧ ಆಸ್ಪತ್ರೆಗಳಲ್ಲಿ ನರ್ಸ್ ಗಳಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಒಟ್ಟು 9 ಜನ ಸಿಬ್ಬಂದಿಗಳನ್ನು ಹೊಂದಿರುವ ಕೋವಿಡ್ ವಾರ್ಡ್ ನಲ್ಲಿ ಕಡಬ ತಾಲೂಕಿನ ಕೊಂಬಾರಿನವರಾದ ಲಾವಣ್ಯ ಕುಶಾಲ್, ಮಡಿಕೇರಿ ತಾಲೂಕು ಕೊಯನಾಡಿನ ದಿವ್ಯಾರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಿವ್ಯಾ ಕೊಯನಾಡು

ಕೋರೋನಾ ವಿರುದ್ದ ಹೋರಾಟ ಮಾಡುತ್ತಿರುವ ಈ ವಾರಿಯರ್ಸ್‌ ಗಳಿಗೆ ನಮ್ಮದೊಂದು‌ ಸೆಲ್ಯೂಟ್.

Leave A Reply

Your email address will not be published.