ಬೆಳ್ಳಾರೆಯಲ್ಲಿ ಮತ್ತೆ ಹಿಂದಿನಂತೆ ವ್ಯಾಪಾರ-ವಹಿವಾಟು | ಬೆಳ್ಳಾರೆ ವರ್ತಕರ ಸಂಘ ನಿರ್ಧಾರ
ಬೆಳ್ಳಾರೆಯಲ್ಲಿ ಮತ್ತೆ ಹಿಂದಿನಂತೆ ವ್ಯಾಪಾರ-ವಹಿವಾಟು ಬೆಳ್ಳಾರೆ ವರ್ತಕರ ಸಂಘ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಬೆಳಿಗ್ಗೆ 6 ರಿಂದ ಸಂಜೆ 7ರ ತನಕ ಅಥವಾ ನಾಳೆ ಬರುವ ಲಾಕ್ ಡೌನ್ 4.0ರ ನಿಯಮಾವಳಿಗಳ ಪ್ರಕಾರ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬೆಳ್ಳಾರೆಯ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಗುನಿಗುತ್ತು ಅವರು ತಿಳಿಸಿದ್ದಾರೆ.
ಲಾಕ್ ಡೌನ್ 3.0 ಘೋಷಣೆಯಾದಾಗ ಸರಕಾರ ಲಾಕ್ ಡೌನ್ ಅನ್ನು ಬಹಳಷ್ಟು ರೀತಿಯಲ್ಲಿ ಸಡಿಲಿಸಿತ್ತು.
ವ್ಯಾಪಾರಿ ವರ್ಗಕ್ಕೆ, ಈ ಹಿಂದೆ ಇದ್ದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗಿನ ಕಟ್ಟುಪಾಡನ್ನು ಸಡಿಲಿಸಿ ಸಂಜೆ 7 ಗಂಟೆಯವರೆಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗಿತ್ತು.
ಹಾಗಿದ್ದರೂ ಬೆಳ್ಳಾರೆಯ ವರ್ತಕರ ಸಂಘದವರು ಹಳೆಯ ಕಟ್ಟುಪಾಡಿಗೆ ಬದ್ಧರಾಗಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ ನಡೆಸಿ ಸ್ವಯಂ ಮುತುವರ್ಜಿ ವಹಿಸಿದ್ದರು.
ಆದರೆ, ನಾಳೆ ಭಾನುವಾರಕ್ಕೆ ಲಾಕ್ ಡೌನ್ 3 ಕೂಡಾ ಮುಗಿಯುತ್ತದೆ. ಹಾಗಾಗಿ ಸೋಮವಾರದಿಂದ ಬೆಳ್ಳಾರೆಯ ಎಲ್ಲ ವ್ಯಾಪಾರಸ್ಥರು ಮತ್ತೆ ಎಂದಿನಂತೆ ಮಾಮೂಲಿಯಾಗಿ ವ್ಯವಹಾರ ನಡೆಸಲು ಉದ್ದೇಶಿಸಿದ್ದಾರೆ ಎಂದು ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಗುನಿಗುತ್ತು ಅವರು ತಿಳಿಸಿದ್ದಾರೆ.