ಬಂದಾರು | ರಸ್ತೆ ಬದಿ 50 ಕ್ಕೂ ಹೆಚ್ಚು ಮಂಗಗಳ ಶವ ಪತ್ತೆ | ವಿಷಪ್ರಾಷಾಣ ಶಂಕೆ
ಬೆಳ್ತಂಗಡಿ: ಬಂದಾರು ಗ್ರಾಮದ ಕುಂಟಾಲಪಲ್ಕೆ ಕಲ್ಲರ್ಪೆ ಎಂಬಲ್ಲಿ ರಸ್ತೆ ಬದಿ ಸುಮಾರು 50ಕ್ಕೂ ಹೆಚ್ಚು ಸತ್ತ ಹಾಗೂ ಜೀವಂತ ಇದ್ದ ಮಂಗಗಳು ಗುರುವಾರ ರಾತ್ರಿ ಪತ್ತೆಯಾಗಿದ್ದು, ಯಾರೋ ಮಂಗಗಳಿಗೆ ವಿಷ ವಿಕ್ಕಿ ಸತ್ತ ನಂತರ ಅದನ್ನು ವಾಹನದಲ್ಲಿ ತಂದು ಇಲ್ಲಿ ಹಾಕಿರಬೇಕೆಂದು ಸಂಶಯಿಸಲಾಗಿದೆ.
ರಸ್ತೆ ಬದಿಯಲ್ಲಿ ರಾತ್ರಿ ವಾಹನದಲ್ಲಿ ಹೋಗುವವರು ಗಮನಿಸಿ ಗ್ರಾ.ಪಂ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಯಾರೋ ವ್ಯಕ್ತಿಗಳು ಬಾಳೆ ತೋಟ ಅಥವಾ ಹಲಸಿನ ಹಣ್ಣಿಗೆ ವಿಷ ವಿಕ್ಕಿದ್ದು, ಅದನ್ನು ತಿಂದ ಮಂಗಳು ವಿಷವೇರಿ ಸಾಮೂಹಿಕವಾಗಿ ಬಿದ್ದಿರುವುದಾಗಿ ಸಂಶಯಿಸಲಾಗಿದೆ.
ಅರೆ ಜೀವದಲ್ಲಿದ್ದ ಕೆಲವು ಮಂಗಳು ಚೇತರಿಸಿಕೊಂಡು ಹತ್ತಿರದ ಕಾಡಿಗೆ ಹೋದರೆ ಉಳಿದವು ಸತ್ತು ಹೋಗಿದೆ. ಸ್ಥಳಕ್ಕೆ ಪಶುವೈದ್ಯಕೀಯ ಇಲಾಖೆಯವರು ಆಗಮಿಸಿ ನಂತರ ಮಹಜರು ನಡೆಸಿ ಮಂಗಗಳ ಶವವನ್ನು ದಹನ ಮಾಡಲಾಯಿತು.
ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷ ಉದಯ ಕುಮಾರ್ ಬಿ.ಕೆ, ಅರಣ್ಯ ಇಲಾಖೆಯ ಪಾರೆಸ್ಟರ್ ಬಿ.ಹೆಚ್ ಪಾಟೀಲ್, ಗಾರ್ಡ್ ಜಗದೀಶ್, ಪಿಡಿಒ ಮೋಹನ್ ಬಂಗೇರ, ಗ್ರಾ.ಪಂ ಸದಸ್ಯ ಹರೀಶ್ ಮೊದಲಾದವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.