” ವಂದೇ ಭಾರತ್ ಮಿಷನ್ ” ನಲ್ಲಿ ಸಿಂಗಾಪುರದಿಂದ ಬೆಂಗಳೂರಿಗೆ ಕರೆತಂದ ಮೊದಲ‌ ವಿಮಾನದ ಕ್ರೂ ನಲ್ಲಿದ್ದಳು ನಮ್ಮ ಕರಾವಳಿಯ ಅಶ್ವಿನಿ

” ವಂದೇ ಭಾರತ್ ಮಿಷನ್ ” ಸಿಂಗಾಪುರದಲ್ಲಿ ಸಿಲುಕಿದ್ದ ಭಾರತೀಯರನ್ನು ಬೆಂಗಳೂರಿಗೆ ಮರಳಿ ನಿನ್ನೆ ಕರೆತಂದ ಮೊದಲ‌ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಗೆ ಸಾರಥಿಯಾದ ಹುಡುಗಿ ನಮ್ಮ ಕರಾವಳಿಯ ಅಶ್ವಿನಿ ಮಂಗಳೂರು.

ಬೆಂಗಳೂರಿನಿಂದ ಮೊದಲ ಏರ್ ಇಂಡಿಯಾಕ್ಕೆ ಸೇರಿದ Ai 1378 – Aik 1379 ವಿಮಾನ ಸಿಂಗಾಪುರಕ್ಕೆ ನಿನ್ನೆ ( ಬುಧವಾರ ) ಬೆಳಗ್ಗೆ ತೆರಳಿ, ಅಲ್ಲಿಂದ ರಾತ್ರಿ 10 ಗಂಟೆಗೆ 152 ಭಾರತೀಯರನ್ನು ಮರಳಿ ಊರಿಗೆ ಕರೆತಂದಿದೆ.

ಈ ವಿಮಾನದಲ್ಲಿ ಏರ್ ಕ್ರೂ ಆಗಿ ಇದ್ದ ನಾಲ್ಕು ಜನರ ಪೈಕಿ ನಮ್ಮ ಕರಾವಳಿಯ ಬೆಡಗಿ ಅಶ್ವಿನಿ ಮಂಗಳೂರು ಇದ್ದರು ಎಂಬುದು ಕರಾವಳಿಯ ಜನತೆಗೆ ಹೆಮ್ಮೆಯ ಸಂಗತಿ. ಮಂಗಳೂರಿನ ಕೋಣಾಜೆಯಲ್ಲಿ ಶಿಕ್ಷಣ ಪೂರೈಸಿ, ಮೂರು ವರ್ಷಗಳಿಂದ ಏರ್ ಇಂಡಿಯಾ ದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ‘ ವಂದೇ ಭಾರತ್ ಮಿಷನ್ ‘ ಗೆ ಆಯ್ಕೆಯಾದ ನೂರು ಮಂದಿ ಕ್ರೂ ಗಳ ಪೈಕಿ ಈಕೆ ಕೂಡಾ ಒಬ್ಬಳು !

ಅತೀ ಬಡತನದಲ್ಲಿ ಶಿಕ್ಷಣ ಪೂರೈಸಿದ ಈಕೆ ವಿದ್ಯಾರ್ಥಿ ಸಮಯದಲ್ಲಿ ಎಬಿವಿಪಿಯ ನಾಯಕಿಯಾಗಿದ್ದಳು. ಚಿಕ್ಕ ವಯಸ್ಸಿನಲ್ಲಿ ನಾಯಕತ್ವದ ಗುಣಗಳನ್ನು ಬೆಳಸಿಕೊಂಡ ಅಶ್ವಿನಿ ಉತ್ತಮ ಭಾಷಣಗಾರ್ತಿಯೂ ಕೂಡಾ ಹೌದು. ಇಂದು ‘ ವಂದೇ ಭಾರತ್ ಮಿಷನ್ ‘ ನಲ್ಲಿ ಆಕೆ ಹೆಮ್ಮೆಯಿಂದ ಭಾಗವಹಿಸಿದ್ದಾಳೆ. ಆ ಮೂಲಕ ಕಠಿಣ ಪರಿಸ್ಥಿತಿಯಲ್ಲೂ ದೇಶದ ಹಿತಕ್ಕೆ ಶ್ರಮಿಸಿರುವುದು ಶ್ಲಾಘನೀಯ ಸಂಗತಿ. ಈ ಕರಾವಳಿಯ ಈ ಕೊರೋನಾ ವಾರಿಯರ್ ಗೆ ನಮ್ಮದೊಂದು ಸಲಾಂ.

Leave A Reply

Your email address will not be published.