ದಕ್ಷಿಣಕನ್ನಡದಲ್ಲಿ ಕೋರೋನಾ ಗೆ ನಾಲ್ಕನೆಯ ಬಲಿ | 58 ವರ್ಷ ಪ್ರಾಯದ ಬೋಳೂರಿನ ಮಹಿಳೆ

ಮಂಗಳೂರಿನ 58 ವರ್ಷ ಪ್ರಾಯದ ಬೋಳೂರಿನ ಮಹಿಳೆ ಕೊರೋನಾ ಬಲಿಯಾಗಿದ್ದಾರೆ.

ಮಂಗಳೂರಿನ 58 ವರ್ಷದ ಮಹಿಳೆ ಮತ್ತು 88 ವರ್ಷದ ವೃದ್ಧೆಯ ಸ್ಥಿತಿ ಚಿಂತಾಜನಕವಾಗಿತ್ತು. ಇಬ್ಬರೂ ವೆನ್ ಲಾಕ್ ಕೋರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈಗ ತೀರಿಕೊಂಡ ಮಹಿಳೆ ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದರು. ಕೋರೋನಾಕ್ಕಿಂತ ಅದೇ ಆಕೆಯನ್ನು ಅತಿಯಾಗಿ ಭಾದಿಸಿತ್ತು.

ಇದೀಗ 58 ವರ್ಷ ಪ್ರಾಯದ ಮಹಿಳೆಯ ಸಾವಿನೊಂದಿಗೆ ದಕ್ಷಿಣ ಕನ್ನಡದಲ್ಲಿ ಒಟ್ಟು ನಾಲ್ಕು ಸಾವು ಸಂಭವಿಸಿದೆ. ಇವುಗಳಲ್ಲಿ ಮೂವರು ಬಂಟ್ವಾಳ ಮೂಲದವರು ಮತ್ತು ಪರಸ್ಪರ ಸಂಬಂಧಿಕರು. ಈಗ ತೀರಿ ಕೊಂಡ ಮಹಿಳೆ ಮಾತ್ರ ಮಂಗಳೂರಿನವರು. ದಕ್ಷಿಣ ಕನ್ನಡದಲ್ಲಿ ತೀರಿಕೊಂಡ ನಾಲ್ವರೂ ಕೂಡಾ ಮಹಿಳೆಯರೇ.

Leave A Reply

Your email address will not be published.