ಪಾಣಾಜೆ | ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆರ್ಲಪದವು – ವತಿಯಿಂದ ದಾದಿಯರಿಗೆ ಗೌರವಾರ್ಪಣೆ

ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆರ್ಲಪದವು – ಪಾಣಾಜೆ ಇದರ ವತಿಯಿಂದ ಅಂತರಾಷ್ಟ್ರೀಯ ದಾದಿಯರ ದಿನವಾದ ಇಂದು ಮಾನವೀಯ ಅನುಕಂಪ , ಸೇವಾ ಮನೋಭಾವದ ಹಾದಿಯಲ್ಲಿ ದೇವರನ್ನು ಕಾಣುವ , ಮಾನವ ಕುಲವನ್ನು ಸಲಹುತ್ತಿರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ಶ್ರೀಮತಿ ಚಂದ್ರಕಲಾ ಹಾಗೂ ಶ್ರೀಮತಿ ಜ್ಯೋತಿ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಗ್ರೇಸಿ ಡಿ ಸೋಜ, ವೈದ್ಯರಾದ ಡಾ. ಜ್ಯೋತಿಶ್ ಗೋಪಿನಾಥ್, ಶ್ರೀಹರಿ ಪಾಣಾಜೆ, , ಟ್ರಸ್ಟ್ ಅಧ್ಯಕ್ಷರಾದ ಚಂದ್ರ ಎ.ಬಿ , ಸಂಚಾಲಕರಾದ ಶ್ರೀಪ್ರಸಾದ್ ಪಾಣಾಜೆ ,ಪ್ರ ಕಾರ್ಯದರ್ಶಿ ಪ್ರಕಾಶ್ ಕುಲಾಲ್,ಸದಸ್ಯರಾದ ಹರಿಪ್ರಸಾದ್ ಕೊಂದಲಡ್ಕ, ಶ್ರೀಕುಮಾರ್ ಕೆ.ಸಿ, ಹರಿಪ್ರಸಾದ್ ಕುಲಾಲ್, ರಾಧಾಕಷ್ಣ ಕೆದಂಬಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave A Reply

Your email address will not be published.