ಸುಳ್ಯ |ಉತ್ತರ ಭಾರತದ ಜನರಿಗೆ ತಮ್ಮ ತಮ್ಮ ಊರುಗಳಿಗೆ ಹೋಗಲು ಅವಕಾಶ


ವರದಿ : ಹಸೈನಾರ್ ಜಯನಗರ

ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ರಾಜ್ಯಾದ್ಯಂತ ಊರಿಗೆ ತೆರಳಲು ಸಾಧ್ಯವಾಗದೆ ಉಳಿದಿರುವ ಕಾರ್ಮಿಕರು ಮತ್ತು ಜನರನ್ನು ತಮ್ಮ ತಮ್ಮ ಊರಿಗೆ ಕಳುಹಿಸುವ ರಾಜ್ಯಸರ್ಕಾರದ ನಿರ್ದೇಶನದಂತೆ ಸುಳ್ಯ ತಾಲೂಕಿನಲ್ಲಿರುವ ಉತ್ತರಭಾರತದ ಜನರನ್ನು ಕಳುಹಿಸುವ ವ್ಯವಸ್ಥೆಯು ತಾಲೂಕಾಡಳಿತದಿಂದ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಸುಳ್ಯ ಬಸ್ಸು ನಿಲ್ದಾಣದಲ್ಲಿ ಬಿಹಾರ ಮೂಲದ ಪ್ರಯಾಣಿಕರಿಗೆ ನೊಂದಾವಣಿ ಕಾರ್ಯವನ್ನು ನಡೆಸಲಾಗುತ್ತಿದೆ. ಈ ಪ್ರಯಾಣಿಕರು ನಾಳೆ 11ಗಂಟೆಗೆ ಮಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ರೈಲಿನಲ್ಲಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.