ಸುಳ್ಯ | ಕರ್ನಾಟಕ ಮುಸ್ಲಿಂ ಜಮಾತ್ ಸುಳ್ಯ ತಾಲೂಕು ಸಮಿತಿ ವತಿಯಿಂದ ಆಹಾರ ಸಾಮಗ್ರಿಗಳ ರಂಜಾನ್ ಕಿಟ್ ವಿತರಣೆ


ವರದಿ : ಹಸೈನಾರ್ ಜಯನಗರ

ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಒಂದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಪದ್ಧತಿಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಪವಿತ್ರ ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ಅಗತ್ಯ ಆಹಾರ ಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ ಸುಳ್ಯ ತಾಲೂಕು ಸಮಿತಿಯ ವತಿಯಿಂದ ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಮಿತಿಯ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಇಂದು ಚಾಲನೆ ನೀಡಿದರು. ತಾಲೂಕಿನ ಸುಮಾರು 15ಕ್ಕೂ ಹೆಚ್ಚು ಮಸಿದಿಗಳ ಆಯಾ ಸಮಿತಿ ಅಧ್ಯಕ್ಷ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿತರಿಸಲಾಗುವುದು ‌.


ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಹಾಜಿ ಮುಸ್ತಫ ಜನತಾ, ತಾಲೂಕು ಸಮಿತಿಯ ಉಪಾಧ್ಯಕ್ಷ ಪಿ ಎ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕದಿಕಡ್ಕ, ಸಂಘಟನಾ ಕಾರ್ಯದರ್ಶಿಅಬ್ದುಲ್ ಹಮೀದ್ ಬೀಜ ಕೊಚ್ಚಿ, ಕಾರ್ಯದರ್ಶಿ ಹಸೈನಾರ್ ಜಯನಗರ, ರಾಜ್ಯ ಸಮಿತಿ ನಿರ್ದೇಶಕ ಅಬ್ದುರಹಿಮನ್ ಮೊಗರ್ಪಣೆ, ನೌಶಾದ್ ಕೆರೆಮೂಲೆ, ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.