ಲಾಕ್ ಡೌನ್ ನ ಕಾಲದಲ್ಲಿ ಸೆಕ್ಸ್ ಗಾಗಿ ಪತಿ ಟಾರ್ಚರ್ ಕೊಡ್ತಿದ್ದಾರೆ ಎಂದು ಆರೋಪಿಸಿ ಪತ್ನಿಯರು ವನಿತಾ ಸಹಾಯವಾಣಿಗೆ ದೂರು
ಬೆಂಗಳೂರು : ಕೊರೊನಾ ವೈರಸ್ ತಂದೊಡ್ಡುತ್ತಿರುವ ಸಮಸ್ಯೆ ಒಂದಾ ಎರಡಾ ? ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಜನರೆಲ್ಲಾ ಬಂಧಿಯಾಗಿದ್ದಾರೆ. ಜನರಿಗೆ ಕೆಲಸ ಇಲ್ಲ. ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ ಮುಂತಾದ ಸಮಸ್ಯೆಗಳ ಮಧ್ಯೆ ಇನ್ನೊಂದು ಹೊಸ ಸಮಸ್ಯೆ ಹುಟ್ಟಿಕೊಂಡಿದೆ.
ಅದು ಕೂಡ ಹಸಿವೆಯಿಂದ ಉಂಟಾದ ಸಮಸ್ಯೆಯೇ. ಹೌದು, ಪತಿ ಈಗ ಮನೆಯಲ್ಲೇ ಇದ್ದಾನೆ. ವಾರದಲ್ಲಿ ಒಂದು ಬಾರಿ ಪತಿ ಮನೆಯಲ್ಲಿದ್ದಾಗ ಇನ್ನಷ್ಟು ದಿನ ಪತಿ ಮನೆಯಲ್ಲಿ ಇರಲಿ ಎಂದು ಆಕೆ ಬಯಸುತ್ತಿದ್ದಳು. ಆದರೆ ಈಗ ಆತ ಮನೆಯಲ್ಲಿ ಮೂರೂ ಹೊತ್ತು ಇರುವುದೇ ಆಕೆಗೆ ತೊಡಕಾಗಿದೆ. ಪತಿ ಪದೇ ಪದೇ ಸೆಕ್ಸ್ ಗಾಗಿ ಟಾರ್ಚರ್ ಕೊಡ್ತಿದ್ದಾರೆ ಅಂತಾ ಆರೋಪಿಸಿ ಪತ್ನಿಯರು ವನಿತಾ ಸಹಾಯವಾಣಿಗೆ ದೂರು ಕೊಡ್ತಿದ್ದಾರೆ.
ಈವರೆಗೆ ಬರೋಬ್ಬರಿ 620 ಕ್ಕೂ ಅಧಿಕ ಕೌಟುಂಬಿಕ ಕಲಹದ ದೂರುಗಳು ದಾಖಲಾಗಿದ್ದು, ಚಿತ್ರವಿಚಿತ್ರ ಕೇಸ್ ಗಳಿಂದಾಗಿ ಮಹಿಳಾ ಸಹಾಯವಾಣಿ ಅಧಿಕಾರಿಗಳೇ ಬೆಚ್ಚಿ ಬೀಳುತ್ತಿದ್ದಾರೆ.
ಕೋವಿಡ್ 19 ಅಬ್ಬರ ಜೋರಾಗುತ್ತಲೇ ಜನ ಮನೆಯಿಂದಲೇ ಕಾರ್ಯನಿರ್ವಹಿಸೋದಕ್ಕೆ ಶುರು ಮಾಡಿದ್ದಾರೆ. ಸದಾ ಕೆಲಸ, ಕಚೇರಿಯಲ್ಲಿ ಬ್ಯುಸಿಯಾಗಿರುತ್ತಿದ್ದ ಗಂಡ ಮನೆಯಲ್ಲಿರುವುದನ್ನು ನೋಡಿ ಸಾಕಷ್ಟು ಮಹಿಳೆಯರು ಪುಳಕಿತರಾಗಿದ್ದರು.
ಆದರೀಗ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿದೆ. ಬೆಂಗಳೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೊಂದಿಕೊಂಡಿರುವ ವನಿತಾ ಸಹಾಯವಾಣಿಗೆ ಲಾಕ್ ಡೌನ್ ಆದಾಗಿನಿಂದಲೂ ಬಿಡುವಿಲ್ಲದಂತೆ ನೂರಾರು ಪೋನ್ ಕರೆಗಳು ಬರುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಬರೋಬ್ಬರಿ 620 ಕೌಟುಂಬಿಕ ಕಲಹದ ಕೇಸುಗಳು ದಾಖಲಾಗಿವೆ.
ಅದರಲ್ಲೂ ಆಸಕ್ತಿಯ ಸಂಗತಿ, ಎಂದರೆ ಪತಿ ತನಗೆ ಸೆಕ್ಸ್ ಗಾಗಿ ಹಿಂಸೆ ಕೊಡುತ್ತಿದ್ದಾನೆ ಎಂಬ ಕೇಸು ಗಳದೇ ಸಿಂಹಪಾಲು. ಇದುವರೆಗೂ ಗಂಡನಿಲ್ಲದ ಸಮಯದಲ್ಲಿ ಗಂಡನನ್ನು ನೆನೆಸಿಕೊಂಡು ಒಂದು ಬಿರು ಬಿಸಿಲ ಮದ್ಯಾಹ್ನದಂದು ಸುಂದರ ಸಮೃದ್ಧ ಸಂಭೋಗಕ್ಕಾಗಿ ಹಾತೊರೆಯುತ್ತಿದ್ದ ಪತ್ನಿಗೆ ಈಗ ಗಂಡನ ಕಾಟ ತಡೆಯಲಾರದೆ ಪತ್ನಿಯರು ಗಂಡನ ವಿರುದ್ದ ದೂರು ನೀಡುತ್ತಿದ್ದಾರೆ. ಹೀಗೆ ಮಹಿಳಾ ಸಹಾಯವಾಣಿಗೆ ಬಂದ ದೂರುಗಳ ಸಂಖ್ಯೆಯೆ ಒಟ್ಟು 193 ಪ್ಲಸ್ ! ಅಷ್ಟೆ ಅಲ್ಲ, ಪತಿ ವಿವಿಧ ಭಂಗಿಗಳಲ್ಲಿ ಹಾಡುಹಗಲೇ ತೊಡಗಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ನಮಗೆ ಮಧ್ಯಾಹ್ನದ ನಿದ್ದೆಗೂ ಬಿಡದೆ ಲಾಕ್ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಹಲವು ಪತ್ನಿಯರ ಕಂಪ್ಲೈಂಟ್ !
ಕೊರೊನಾ ಕಾಣಿಸಿಕೊಂಡ ನಂತರದ ಇತರ ಕೇಸುಗಳು
ಮಹಿಳೆಯರ ಮೇಲಿನ ದೌರ್ಜನ್ಯ-193 ಕೇಸ್ ಗಳು ಮಹಿಳೆಗೆ ರಸ್ತೆಯಲ್ಲಿ ಸಮಸ್ಯೆ- ಹೊಯ್ಸಳ ಸಹಾಯ – 8 ಕೇಸ್ ಗಳು
ಕುಟುಂಬದಲ್ಲಿ ನಿತ್ಯ ಜಗಳ -56
ಮಕ್ಕಳ ಮೇಲಿನ ದೌರ್ಜನ್ಯ-6 ಕೇಸ್ ಗಳು
ಮೇಲಿನ ಒಟ್ಟು ಎಲ್ಲಾ ಕೇಸುಗಳು 620 ಪ್ರಕರಣಗಳು ದಾಖಲಾಗಿವೆ.
ಆದ್ರೆ ಸೆಕ್ಸ್ ಗಾಗಿ ಪೀಡಿಸುತ್ತಿರುವ ಗಂಡನನ್ನು ಏನು ಕೂಡಾ ಮಾಡಲಾಗದೆ ಮಹಿಳಾ ಸಹಾಯವಾಣಿಯವರು ಅಸಹಾಯಕರಾಗಿ ಕುಳಿತುಕೊಳ್ಳುವಂತಾಗಿದೆ. ಗಂಡನನ್ನು ಪ್ರಶ್ನಿಸಿದರೆ, ” ನಾನು ಮದ್ವೆ ಆದದ್ದು ಮತ್ತೆ ಏನಕ್ಕೆ, ನೀವೇ ಹೇಳಿ ಬೇರೆ ನಾ ಏನು ಮಾಡಲಿ ? ” ಎಂದು ಗಂಡಂದಿರು ಮರು ಪ್ರಶ್ನಿಸುತ್ತಾರೆ. ಮಹಿಳಾ ಸಹಾಯ ವಾಣಿಯವರ ಬಳಿ ಅದಕ್ಕೆ ಉತ್ತರ ಇಲ್ಲದೆ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ಸು ಬರುವಂತಾಗಿದೆ.
ಡಿಸಿಪಿ ಇಶಾ ಪಂತ್ ಸೇರಿದಂತೆ 8 ಮಂದಿ ಆಪ್ತ ಸಮಾಲೋಚಕಿರು, ಮಹಿಳಾ ಕಾನ್ಸ್ಟೇಬಲ್ ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದರ ಮಧ್ಯೆ ಹೆಂಡತಿಯರಿಗೆ ಗಂಡಂದಿರ ಮೇಲೆ ಡೌಟ್ ಜಾಸ್ತಿಯಾಗಿದೆ ಅಂತೆ. ಮನೆಯಲ್ಲಿ ಇಷ್ಟೆಲ್ಲಾ ಆಟ ಆಡುವ ಈತ, ಡ್ಯೂಟಿಗೆ ಅಂತ ಹೋಗಿದ್ದಾಗ ಆಫೀಸಿನಲ್ಲಿ ಏನೆಲ್ಲಾ ಕಸರತ್ತು ನಡೆಸಿದ್ದಾನೋ ಎಂಬ ಭಯ ಮತ್ತು ಅನುಮಾನ ಪತ್ನಿಯರದು.