ಸುಳ್ಯ ತಾಲೂಕಿನ ಎಲ್ಲಾ 54 ಕ್ವಾರಂಟೈನ್ ವ್ಯಕ್ತಿಗಳ ರಿಪೋರ್ಟ್ ನೆಗೆಟಿವ್ | ಆತಂಕದಲ್ಲಿದ್ದ ಜನ ಈಗ ನಿರಾಳ
ಸುಳ್ಯ ಒಂದು ದೀರ್ಘ ನಿಟ್ಟುಸಿರು ಬಿಟ್ಟಿದೆ. ಮನಸ್ಸಿನ ಮೂಲೆಯಲ್ಲೆಲ್ಲೋ ಕೊರೋನಾ ಕುರಿತಾದ ಒಂದು ಆತಂಕದಿಂದ ಇದ್ದ ಜನರಿಗೆ ಈಗ ನೆಮ್ಮದಿ.
ಸುಳ್ಯ ತಾಲೂಕಿನಲ್ಲಿ ಒಟ್ಟು 54 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು, ಈಗ ಅವರೆಲ್ಲರದ್ದೂ ನೆಗೆಟಿವ್ ವರದಿ ಬಂದಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದ ಸುಬ್ರಹ್ಮಣ್ಯ ಬಳಿಯ ವ್ಯಕ್ತಿಯೊಬ್ಬರನ್ನು ಹಾಗೂ ಅವರ ಮನೆಯವರನ್ನು ಹೆಂಗೆ ಒಳಪಡಿಸಲಾಗಿತ್ತು. ಅಲ್ಲದೇ ಆ ವ್ಯಕ್ತಿಯನ್ನು ಮಾತನಾಡಿಸಲು ಹೋಗಿದ್ದ ಗುತ್ತಿಗಾರು ಗ್ರಾಮದ ಕಮಿಲದ ಕುಟುಂಬವೊಂದನ್ನು ಮತ್ತು ಪೆರಾಜೆಯ ಕುಟುಂಬವನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದು ಮುನ್ನೆಚ್ಚರಿಕಾ ಕ್ರಮವಾಗಿ ಮಾಡಿದ ಕ್ವಾರಂಟೈನ್ ಆಗಿತ್ತು.
ಇಂದು ಅವರೆಲ್ಲರ ಪರೀಕ್ಷಾ ವರದಿಗಳೂ ಸೇರಿದಂತೆ ಸುಳ್ಯದಲ್ಲಿ ಇದುವರೆಗೆ ಕಲಿಸಿದ ಎಲ್ಲಾ ಪರೀಕ್ಷಾ ವರದಿಗಳೂ ನೆಗೆಟಿವ್ ಆಗಿ ಬಂದಿದ್ದು ಸುಳ್ಯ ಈಗ ಸುರಕ್ಷಿತ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ಗೆ ಒಳಪಟ್ಟು ಇದೀಗ ಕೊರೊನಾ ನೆಗೆಟಿವ್ ವರದಿ ಬಂದಿರುವುದು, ಮನೆಯಿಂದ ಹೊರಗೆ ಹೋಗದೆ ಇಷ್ಟು ದಿನ ಕಳೆದ ಜನರಿಗೂ ಇನ್ನು ಪೂರ್ತಿ ರಿಲೀಫ್.