ಮುಕ್ಕೂರು : 260 ಮನೆಗಳಿಗೆ ತರಕಾರಿ ಕಿಟ್ ವಿತರಣೆ

ಮುಕ್ಕೂರು : ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲ ಮತ್ತು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ 260 ಮನೆಗಳಿಗೆ ತರಕಾರಿ ಕಿಟ್ ವಿತರಣೆಗೆ ಮೇ.5 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ಚಾಲನೆ ನೀಡಲಾಯಿತು.

ಕಿಟ್ ವಿತರಣೆಗೆ ಚಾಲನೆ ನೀಡಿದ ಜಿ.ಪಂ.ಸದಸ್ಯ ಎಸ್.ಎನ್‌. ಮನ್ಮಥ ಮಾತನಾಡಿ, ಕೊರೊನಾ ಲಾಕ್ ಡೌನ್ ಸಡಿಲಿಸಿದರೂ ಮುಂದಿನ ಎರಡು ತಿಂಗಳ ಕಾಲ ನಾವೆಲ್ಲರೂ ಜಾಗರೂಕತೆಯಿಂದ ಇರಬೇಕು. ಪರಸ್ಪರ ಸಹಕಾರ ಮನೋಭಾವದೊಂದಿಗೆ ಕಷ್ಟ ಕಾಲದಲ್ಲಿ ನೆರವಾಗುವ ಅಗತ್ಯತೆ ಇದೆ. ಆ ಕೆಲಸ ಸಂಘಟನೆಗಳ‌ ಮೂಲಕ ಆಗುತ್ತಿದೆ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿಯ ಜತೆಗೆ ಕಷ್ಟಕಾಲದಲ್ಲಿ ನೆರವಾಗುವುದು ಅಷ್ಟೇ ಮಹತ್ವದ್ದು ಎಂದರು.

ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಮಾತನಾಡಿ, ಸಂಘಟನೆಯ ಪರೋಪಕಾರಿ ಚಿಂತನೆಗಳು ಉತ್ತಮವಾದದು. ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದರು.

ಜ್ಯೋತಿ ಯುವಕ ಮಂಡಲ ಅಧ್ಯಕ್ಷ ನಾರಾಯಣ ಕೊಂಡೆಪ್ಪಾಡಿ ಮಾತನಾಡಿ, ಎರಡೂ ಸಂಘಟನೆಗಳು ಜಂಟಿಯಾಗಿ ತರಕಾರಿ ಕಿಟ್ ವಿತರಣೆಗೆ ನಿರ್ಧರಿಸಿ, ಅದರಂತೆ 260 ಮನೆಗಳಿಗೆ ವಿತರಿಸಲು ಕಿಟ್ ತಯಾರಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಅರ್ಚಕ ಸುರೇಶ್ ಉಪಧ್ಯಾಯ,ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಕಾರ್ಯದರ್ಶಿ ಸುದೀಪ್ ಕೊಂಡೆಪ್ಪಾಡಿ, ಖಜಾಂಜಿ‌ ದಿವಾಕರ ಬೀರುಸಾಗು,ಜ್ಯೋತಿ ಯುವಕ ಮಂಡಲ ಕಾರ್ಯದರ್ಶಿ ನವೀನ್ ಶೆಟ್ಟಿ ಬರಮೇಲು, ಯುವಸೇನೆಯ ಸಂಚಾಲಕ ಸಚಿನ್ ರೈ ಪೂವಾಜೆ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಜಾಲು, ಜ್ಯೋತಿ ಯುವಕ ಮಂಡಲ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ಗೌಡ ಬೈಲಂಗಡಿ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ದಾಮೋದರ ಗೌಡ ತೋಟ, ಮರಿಕೈ, ಮಂಜುನಾಥ ಗೌಡ ಕಂಡಿಪ್ಪಾಡಿ, ಸೋಮನಾಥ ಕೆ ಮೊದಲಾದವರು ಉಪಸ್ಥಿತರಿದ್ದರು.

ಜ್ಯೋತಿ ಯುವಕ ಮಂಡಲದ ಸಲಹೆಗಾರ ಕುಶಾಲಪ್ಪ ಗೌಡ ಪೆರುವಾಜೆ ಪ್ರಸ್ತಾವನೆಗೈದು ನಿರೂಪಿಸಿದರು. ಶರತ್ ನೀರ್ಕಜೆ ವಂದಿಸಿದರು.

Leave A Reply

Your email address will not be published.