ರಾಜ್ಯದಲ್ಲಿ ಹರಿದ ಎಣ್ಣೆ ! 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ದಾಖಲೆಯ ಮದ್ಯ ಮಾರಾಟ !
ಇಂದು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನಲೆಎಲ್ಲಿ ಬೆಳಿಗ್ಗೆಯಿಂದಲೇ ಜನಸಾಗರ ಹರಿದು ಬಂದು ಮದ್ಯ ಖರೀದಿಸಿದ್ದು ಈಗ ಜಗಜ್ಜಾಹೀರು.
ರಾಜ್ಯದಲ್ಲಿ ಮದ್ಯದ ಹೊಳೆ ಹೊಳೆಯೇ ಹರಿದಿದೆ. ಅದರ ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಹಣದ ಮಳೆ ಸುರಿದಿದೆ.
ಇಂದು ಒಂದೇ ದಿನ ಅಬಕಾರಿ ಇಲಾಖೆಗೆ ಬರೋಬ್ಬರಿ 45 ಕೋಟಿ ರೂ. ಆದಾಯ ಲಭಿಸಿದೆ.
ರಾಜ್ಯಾದ್ಯಂತ ಒಟ್ಟು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ದೇಶಿಯ ಮದ್ಯ ಮಾರಾಟವಾಗಿದೆ.
ರಾಜ್ಯ ಅಬಕಾರಿ ಇಲಾಖೆಯ ಸಾರ್ವಕಾಲಿಕ ದಾಖಲೆಯ ಆದಾಯ ಇದಾಗಿದೆ.
ಈ ಬಗ್ಗೆ ರಾಜ್ಯ ಅಬಕಾರಿ ಆಯುಕ್ತರಿಂದ ಪತ್ರಿಕಾ ಪ್ರಕಟಣೆ ಹೊರಬಿದ್ದಿದೆ.