ಇದು ಲಾಕ್ ಡೌನ್ 3.0 | ಬಹುತೇಕ ಸೇವೆಗಳು ಲಭ್ಯ | ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ಡೌನ್
ಕಂಟೈನ್ಮೆಂಟ್ ಝೋನ್ನಲ್ಲಿ ಎಲ್ಲವೂ ಬಂದ್, ಉಳಿದೆಡೆ ರಿಲ್ಯಾಕ್ಸ್
ಬೆಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಸಡಿಲಿಕೆಗೊಂಡಿದೆ. ಇಂದಿನಿಂದ ಕರ್ನಾಟಕದಲ್ಲಿ ಕೂಡಾ ಲಾಕ್ಡೌನ್ ರಿಲೀಫ್ ಆಗಿದೆ.
ಕರ್ನಾಟಕದಲ್ಲಿ ಲಾಕ್ಡೌನ್ ಭಾಗಶಃ ಸಡಿಲವಾಗಿದ್ದು, ಹೆಚ್ಚು ಕಮ್ಮಿಒಂದೂವರೆ ತಿಂಗಳ ಬಳಿಕ ಮುಕ್ಕಾಲು ಭಾಗ ಕರ್ನಾಟಕ ಓಪನ್ ಆಗಲಿದೆ. ಕಂಟೈನ್ಮೆಂಟ್ ಝೋನ್ಗಳನ್ನು ಬಿಟ್ಟು ಉಳಿದೆಡೆ ಅಗತ್ಯ ಸೇವೆಗಳು ಲಭ್ಯವಾಗಲಿದೆ. ಆದರೆ ಕಂಟೈನ್ಮೆಂಟ್ ಝೋನ್ಗಳಲ್ಲಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ರೆಡ್ ಝೋನ್, ಆರೇಂಜ್ ಝೋನ್, ಗ್ರೀನ್ ಝೋನ್
ಈ ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ಮದ್ಯ ದೊರೆಯಲಿದೆ. ಆದರೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಮದ್ಯ ಇರಲ್ಲ.
ಇಂದಿನಿಂದ ಏನಿರುತ್ತೆ, ಏನಿರಲ್ಲ ? ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಇಂದಿನಿಂದ ಏನಿರುತ್ತೆ ?
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಮದ್ಯದಂಗಡಿ ಓಪನ್ ಆಗಲಿದೆ. ಪಾನ್, ಗುಟ್ಕಾ, ಸಿಗರೇಟ್, ಬೀಡಿ ಮಾರಾಟಕ್ಕೆ ಹಾಗೂ ಮದುವೆ, ಶುಭ ಸಮಾರಂಭಗಳಿಗೆ ಅವಕಾಶ (ಗರಿಷ್ಠ 50 ಮಂದಿ) ಅವಕಾಶ.
ಅಂತ್ಯಕ್ರಿಯೆಯಲ್ಲಿ 20 ಜನ ಪಾಲ್ಗೊಳ್ಳಬಹುದು: ಸಾಮಾಜಿಕ ಅಂತರ ಪಾಲನೆ ಕಡ್ಡಾಯ, ಮಾಸ್ಕ್ ಧರಿಸುವುದು ಕಡ್ಡಾಯ. ಅಲ್ಲದೆ ಕೆಲಸದ ಸ್ಥಳಗಳಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಾಗಿದೆ.
ಏನಿರಲ್ಲ ?
ರೈಲು, ಮೆಟ್ರೋ, ವಿಮಾನ ಸಂಚಾರ ಇರಲ್ಲ. ಅಂತರ್ ರಾಜ್ಯಗಳ ನಡುವೆ ಬಸ್ ಸಂಚಾರ ಇರಲ್ಲ. ಶಾಲೆ ಕಾಲೇಜು, ದೇಗುಲ, ಆತಿಥ್ಯ ಸೇವೆ ಇರಲ್ಲ. ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ ಇರಲ್ಲ.
ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷೇಧ ಮಾಡಲಾಗಿದೆ. ಸಾರ್ವಜನಿಕ ಶೌಚಾಲಯ ಬಳಕೆಗೆ ಅವಕಾಶವಿಲ್ಲ.