ಗೃಹಿಣಿಯರಿಗಿರಲಿಲ್ಲ ಲಾಕ್ಡೌನ್ !
ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿಯಾಗಿತ್ತು. ಅಲ್ಲೊಬ್ಬಳು ಗೃಹಿಣಿ ಅಂತರಂಗದಲ್ಲೇ ಸಾವಿರಾರು ಚಿಂತೆಯನ್ನಿಟ್ಟುಕ್ಕೊಂಡು ಹೊರಗಡೆ ತೋರ್ಪಡಿಸಿಕೊಳ್ಳದೆ ತನ್ನದೇ ಆದ ಲೋಕದಲ್ಲಿ ಮುಳುಗಿದ್ದಳು. ಇದು ಯಾವುದೇ ಕಥೆ ಕಾದಂಬರಿಯಲ್ಲ. ಬದಲಾಗಿ ದೇಶದ ಬಹುತೇಕ ಗೃಹಿಣಿಯರ ಇಂದಿನ ಕಥೆ – ವ್ಯಥೆ. ಒಬ್ಬ ಗೃಹಿಣಿಯಾಗಿ ಒಂದು ಮನೆಯನ್ನು ನಡೆಸುವುದು ಸುಲಭದ ಮಾತಲ್ಲ. ಎಲ್ಲರಿಗಿಂತ ಮುಂಚೆ ಎದ್ದು ಬೆಳಗ್ಗಿನ ಉಪಹಾರ ತಯಾರಿಸಿ ಮಕ್ಕಳನ್ನು ರೆಡಿ ಮಾಡಿ ಗಂಡ ಆಫೀಸಿಗೆ ಹೊರಡುವಷ್ಟರಲ್ಲಿ ಆತನ ಸಮಯಕ್ಕೆ ಕುಂದು ಬರದಂತೆ ಅವನಿಗೆ ಬೇಕಾದನ್ನೆಲ್ಲ ತಯಾರಿಸಿ ಕೊಟ್ಟು ಮಕ್ಕಳು ಗಂಡ ಮನೆಯಿಂದ ಹೊರಟ ಮೇಲೆ ಹೊಟ್ಟೆ ಹಸಿವಾದರೂ ಮನಸ್ಸು ಮಾತ್ರ ಯಾವುದೂ ಬೇಡವೆನ್ನುತ್ತಿತ್ತು.
ತಿಂಡಿ ತಿಂದಿಯಾ ಎಂದು ಕೇಳುವವರಂತೂ ಯಾರೂ ಇಲ್ಲ. ಆದರೆ ಲಾಕ್ ಡೌನ್ ಆದೇಶ ಬಂದ ಮೇಲೆ ಎಲ್ಲವೂ ಬದಲಾಗಿದೆ. ಇಂದು ಯಾರಿಗಾಗಿ ತಾನು ಇಷ್ಟು ವರ್ಷ ತನ್ನೆಲ್ಲಾ ಖುಷಿಯನ್ನು ಮಕ್ಕಳ ಭವಿಷ್ಯಕ್ಕೊಸ್ಕರ ತ್ಯಾಗ ಮಾಡುತ್ತಾ ಬಂದಿದ್ದೇನೋ ಅವರೆಲ್ಲರ ಜೊತೆ ದಿನಪೂರ್ತಿ ಸಮಯ ಕಳೆಯುವ ಸಂದರ್ಭ ಬಂದೊದಗಿದಾಗ ಕೋರೋನಾ ವೈರಸ್ ಗಂಡನಿಗೆಿನಿಂದ ಕದ್ದು ಕೂಡಿಟ್ಟ ಸ್ವಲ್ಪ ಹಣ. ನಾವು ಎಷ್ಟೋ ಬಾರಿ ಗಂಡನ ಜೇಬಿನಿಂದ ಹಣ ಎಗರಿಸುವಾಕೆ ಎಂದು ಆಕೆಯನ್ನು ಲೇಖನಗಳಲ್ಲೋ ಕಥೆಗಳಲ್ಲೋ ಅನೇಕ ಬಾರಿ ಓದಿ ನಗುತ್ತೇವೆ. ಆದರೆ ಆ ಹಣವನ್ನು ಆಕೆ ಮೀಸಲಿಡುವುದು ತನ್ನ ಕುಟುಂಬಕ್ಕೋಸ್ಕರ ಎನ್ನುವುದನ್ನು ಒಮ್ಮೆಯೂ ಯೋಚಿಸುವುದಿಲ್ಲ. ಇದು ವಾಸ್ತವ.
ಇನ್ನು ಚಿಂತೆ : ಮನೆಗೆ ಬೇಕಾದ ಸಾಮಾಗ್ರಿಗಳ ಬೆಲೆ ಏರಿದರೆ ಏನು ಮಾಡುವುದು. ಗಂಡನಿಗೆ ಆದಾಯವಿಲ್ಲದಿದ್ದರೆ ಮನೆ ನಡೆಸುವುದು ಹೇಗೆ ! ಮಕ್ಕಳ ಭವಿಷ್ಯದ ಗತಿಯೇನು ಹೀಗೆ ಹಲವಾರು ಯೋಚನೆಗಳಿಂದ ಆಕೆ ಮತ್ತೆ ಕುಗ್ಗುತ್ತಿದ್ದಾಳೆ.
ಹಾಗಾಗಿ ಶೀಘ್ರದಲ್ಲಿ ಭಾರತ ಕೋರೋನಾದಿಂದ ಮುಕ್ತವಾಗಿ ಮತ್ತೆ ಮೊದಲಿನಂತಾಗಲಿ ಎಂದು ಪ್ರಾರ್ಥಿಸುವ ಜತೆಗೆ ಪ್ರತಿ ಕುಟುಂಬಸ್ಥರು ಎಷ್ಟೇ ಒತ್ತಡಗಳಿದ್ದರೂ ಮನೆಗೆ ಬಂದಾಗ ಸಿಡಿಮಿಡಿಗೊಳ್ಳದೆ ಆದರಿಸುವ ಗೃಹಿಣಿಯನ್ನು ಪ್ರೀತಿ ಮತ್ತು ಗೌರವದಿಂದ ಕಂಡು ಆಕೆಯ ಮುಗುಳ್ನಗೆಗೆ ಸಾಕ್ಷಿಗಳಾಗೋಣ.