40 ದಿನಗಳ ಬಳಿಕ ಮದ್ಯ ಸಿಕ್ಕ ಖುಷಿಗೆ, ನೀರು ಬೆರೆಸದೆ ‘ ಸುಕ್ಕಾ ‘ ಹೊಡೆದ | ಬಿರುಬಿಸಿಲಲ್ಲಿ ನಿದ್ರೆಗೆ ಜಾರಿದ !

ಚಿಕ್ಕಮಗಳೂರು : ಇಷ್ಟು ದಿನ ಕುಡುಕರು ಮದ್ಯ ಸಿಗದೆ ಥರಾವರಿ ಆವಾಂತರ ಸೃಷ್ಟಿಸಿಕೊಳ್ಳುತ್ತಿದ್ದರು. ಕೆಲವರು ಮದ್ಯದಂಗಡಿಗೆ ಕನ್ನ ಹಾಕಿದ್ದಾರೆ. ಮತ್ತೆ ಕೆಲವರು ಮದ್ಯದಂಗಡಿಯ ಹೆಂಚು ತೆಗೆದು ಒಳ ನುಗ್ಗಿ ಮದ್ಯ ಕದ್ದಿದ್ದಾರೆ. ಇನ್ನು ಕೆಲವರು ಮಧ್ಯದಂಗಡಿಗೆ ನುಗ್ಗಿ ಆಸೆ ತಡೆಯಲಾಗದೆ ಅಲ್ಲೇ ಕುಡಿದು ಮಲಗಿ ಮರುದಿನ ಸಿಕ್ಕಿಬಿದ್ದಿದ್ದಾರೆ.

ಈಗ ಅದೆಲ್ಲ ಹಳೆಯ ಕಥೆ. ಇವತ್ತಿನಿಂದ ಹೊಸ ಕಥೆ ಶುರು.
ಈಗ 40 ದಿನದ ಬಳಿಕ ಮದ್ಯ ಸಿಕ್ಕ ಖುಷಿಗೆ ಕುಡಿದು ಇಷ್ಟು ದಿನ ಮದ್ಯ ಬರಗೆಟ್ಟು ಕುಳಿತಿದ್ದ ವ್ಯಕ್ತಿಯೊಬ್ಬ ಹಳೆಯ ಕೋಟಾವನ್ನೆಲ್ಲ ಬಾಕಿ ತೀರಿಸಲು ಏನೋ ಎಂಬಂತೆ ಸಿಕ್ಕಾಪಟ್ಟೆ ಏರಿಸಿದ್ದಾನೆ. ಲೋಡು ಜಾಸ್ತಿ ಆಗಿ ರಸ್ತೆಯಲ್ಲಿಯೇ ‘ಸೈಲೆಂಟ್ ಮೋಡ್ ‘ ಗೆ ಜಾರಿದ್ದಾನೆ.

ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಸೋಮವಾರ ನಡೆದಿದೆ.

ತರೀಕೆರೆಯ ಈ ವ್ಯಕ್ತಿ ಕೂಡ ಮದ್ಯವನ್ನು ಖರೀದಿಸಿ ಮನೆಗೆ ಕೊಂಡು ಹೋಗುವುದನ್ನು ಬಿಟ್ಟು ದಾರಿ, ಅಲ್ಲೇ ಒಂದಷ್ಟು ನೀರು ಬೆರೆಸದೆ ‘ ಸುಕ್ಕಾ ‘ ಏರಿಸಿದ್ದಾನೆ. ಅಮಲು ಸರಕ್ಕನೆ ಮೆದುಳಿಗೆ ಸ್ಪೈಕ್ ಆಗಿ ಬ್ಯಾಲೆನ್ಸ್ ತಪ್ಪಿ ಕೊನೆಗೆ ರಸ್ತೆಯಲ್ಲೇ ಬಿದ್ದು ಕೊಂಡಿದ್ದಾನೆ. ಹಾಗೆ ಬಿದ್ದುಕೊಂಡ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

Leave A Reply

Your email address will not be published.