ಚಾಕಲೇಟ್ ಹೀರೋ ರಿಷಿ ಕಪೂರ್ ವಿಧಿ ವಶ

ಕೊರೊನಾ ವೈರಸ್ ಕಂಗೆಟ್ಟಿರುವ ಜನತೆಗೆ ಒಂದರ ಹಿಂದೊಂದು ಆಘಾತಕಾರಿ ಸುದ್ದಿಗಳು ಕೇಳುವಂತಾಗಿದೆ. ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖದಲ್ಲಿರುವ ಭಾರತೀಯ ಚಿತ್ರರಂಗ, ಮತ್ತೊಬ್ಬ ಹಿರಿ ದಿಗ್ಗಜನನ್ನು ಕಳೆದುಕೊಂಡು ಮತ್ತಷ್ಟು ಆಘಾತಕ್ಕೆ ಒಳಗಾಗಿದೆ.


Ad Widget

Ad Widget

Ad Widget

Ad Widget
Ad Widget

Ad Widget

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ (67) ಗುರುವಾರ ಬೆಳಿಗ್ಗೆ ನಿಧನರಾದರು.


Ad Widget

ಅಮೆರಿಕದಲ್ಲಿ ಕಳೆದ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ ಒಳಲಾಗಿದ್ದ ರಿಷಿ ಕಪೂರ್ ಗೆ ಉಸಿರಾಟದ ತೊಂದರೆ ಇತ್ತು. ಬುಧವಾರ ಬೆಳಿಗ್ಗೆ ಅವರನ್ನು ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಅವರು ಚಿತ್ರರಂಗದ ಕುಡಿ ತಂದೆ ರಾಜ್ ಕಪೂರ್ ಅವರು ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು. ತಮ್ಮ ತಂದೆ ರಾಜ್ ಕಪೂರ್ ಜೊತೆಗೆ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ನಟಿಸುವ ಮೂಲಕ 1970 ರಲ್ಲಿ ಬಾಲನಟನಾಗಿ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ತನ್ನ ನಟನೆಯ ಶೈಲಿ, ರೋಮ್ಯಾಂಟಿಕ್ ಪಾತ್ರಗಳು ಹಾಗೂ ವ್ಯಕ್ತಿತ್ವದಿಂದ ಅಲ್ಪಕಾಲದಲ್ಲೇ ಜನಪ್ರಿಯರಾಗಿದ್ದ ಅವರು ನೂರಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದರು.

ಇದೀಗ ಅವರ ಮಗ ರಣಬೀರ್ ಕಪೂರ್ ಅವರು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. 113 ಚಿತ್ರಗಳಲ್ಲಿ ಅವರು ನಟಿಸಿದ ಇವರನ್ನು ಇದೀಗ ಚಿತ್ರರಂಗ ಕಳೆದುಕೊಂಡಿದೆ.

error: Content is protected !!
Scroll to Top
%d bloggers like this: