ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಸಹಕಾರ ಸಚಿವರ ಭೇಟಿ | ಬೆಳೆ ಸಾಲದ ಹೊಸ ನಿಯಮಾವಳಿ ಬದಲಿಗೆ ಸಚಿವರ ಒಪ್ಪಿಗೆ
ಈ ದಿನ ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದ, ಕ್ಯಾಂಪ್ಕೊ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಕೆ ಎಂ ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ, ಮತ್ತು ಶಿವರಾಂ ಹೆಬ್ಬಾರ್ ಇವರನ್ನು ಒಳಗೊಂಡ ನಿಯೋಗ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ದೇಣಿಗೆಯನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸರ್ಕಾರ ಇತ್ತೀಚಿಗೆ ಹೊರಡಿಸಿದ ಬೆಳೆ ಸಾಲದ ಹೊಸ ನಿಯಮಾವಳಿಯನ್ನು ಹಿಂಪಡೆಯಬೇಕಾಗಿ ವಿನಂತಿ ಮಾಡಿದ್ದಾರೆ.
ಅದಕ್ಕೆ ಒಪ್ಪಿಕೊಂಡ ಸಹಕಾರ ಮಂತ್ರಿಗಳು ತಕ್ಷಣ ಹೊಸ ಸುತ್ತೋಲೆಯನ್ನು ನೀಡಲು ಮುಖ್ಯ ಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಪ್ರಾಥಮಿಕ ಸಹಕಾರಿ ಸಂಘಗಳು ಮತ್ತು ರೈತರ ಪರವಾಗಿ ಹೋಗಿ ಕೆಲಸ ಮಾಡಿಕೊಂಡು ಬಂದ ನಿಯೋಗಕ್ಕೆ ರೈತರು ಧನ್ಯವಾದ ಹೇಳುತ್ತಿದ್ದಾರೆ.