ಕಡಬ ತಾಲೂಕಿನಾದ್ಯಂತ ಗುಡುಗು ಗಾಳಿ ಸಹಿತ ಧಾರಕಾರ ಮಳೆ


ಕಡಬ: ಕಡಬ ತಾಲೂಕಿನಾದ್ಯಂತ ಸುತ್ತಮುತ್ತ ಭಾನುವಾರ ಸಾಯಂಕಾಲ ಗುಡುಗು ಗಾಳಿ ಸಹಿತ ಧಾರಕಾರ ಮಳೆಯಾಗಿದೆ.


ತಾಲೂಕಿನ ಕೊೈಲ , ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಕೋಡಿಂಬಾಳ, ಕೊಂಬಾರು, ನೂಜಿಬಾಳ್ತಿಲ, ಪೆರಾಬೆ, ಸವಣೂರು, ಕಾಣಿಯೂರು ಮೊದಲಾದ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಕಾರ ಮಳೆಯಾಗಿದೆ.

ಕೆಲವು ಕಡೆ ರೈತರ ಅಡಿಕೆ, ಬಾಳೆ ಗಿಡಗಳು ಧರಶಾಯಿಯಾಗಿ ಅಪಾರ ನಷ್ಟವಾಗಿದೆ. ಕಡಬ ಗ್ರಾಮದ ಸುತ್ತಮುತ್ತ ಕೆಲವು ಪ್ರದೇಶದಲ್ಲಿ ಅಲಿಕಲ್ಲು ಮಳೆಯಾಗಿದೆ.

ಕಡಬ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಗೋಳಿತ್ತಡಿ ಎಂಬಲ್ಲಿ ಗಾಳಿ ತಳಿಯ ಹಲವು ಮರಗಳು ರಸ್ತೆಗೆ ಉರುಳಿತು. ಇದರಿಂದ ವಿದ್ಯುತ್ ತಂತಿ, ಕಂಬಗಳಿಗೆ ಹಾನಿಯಾಗಿದೆ. ಕಡಬ ಪೊಲೀಸರು ಸ್ಥಳಿಯರ ನೆರವಿನೊಂದಿಗೆ ಮರ ತೆರವುಗೊಳಿಸಿದರು. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

Leave A Reply

Your email address will not be published.