ಪ್ರಧಾನಿ ಜತೆ ಸಿ.ಎಂ ಕಾನ್ಫರೆನ್ಸ್| ರಾಜ್ಯದಲ್ಲಿ ಮೇ.15 ರವರೆಗೆ ಲಾಕ್‌ಡೌನ್ ವಿಸ್ತರಣೆ ಗೆ ಬಿಎಸ್‌ವೈ ಮನವಿ

Share the Article

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಕೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನು ಕೂಡ ಯಾವುದೇ ತೀರ್ಮಾನ ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ.


ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಬಗ್ಗೆ ಸೂಕ್ತ‌ ತೀರ್ಮಾನ ಕೈಗೊಳ್ಳುವ ಹಿನ್ನೆಲೆಯಲ್ಲಿ ಏ. 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸಿದರು.


ಯಡಿಯೂರಪ್ಪ ಮಾತನಾಡಿ, ಕೇಂದ್ರ ಕೈಗೊಳ್ಳುವ ಎಲ್ಲಾ ತೀರ್ಮಾನಗಳನ್ನು ರಾಜ್ಯ ಸರಕಾರ ಬೆಂಬಲಿಸಲಿದೆ. ರಾಜ್ಯದಲ್ಲಿ ಮೇ 3ರ ಬಳಿಕವೂ ಲಾಕ್ ಡೌನ್ ಮುಂದುವರಿಸುವುದು ಸೂಕ್ತ. ಕನಿಷ್ಠ ಮೇ .15ರವರೆಗಾದರೂ ಮುಂದುವರಿಸುವುದು ಸೂಕ್ತ ಎಂದರು.
ವೀಡಿಯೋ ಸಂವಾದದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ.

https://hosakannada.com/wp-admin/post.php?post=16361&action=edit

Leave A Reply

Your email address will not be published.