ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 3 ರ ವರೆಗೆ ಲಾಕ್ ಡೌನ್ ಸಡಿಲಿಕೆ ಇಲ್ಲ, ಯಥಾ ಸ್ಥಿತಿ ಮುಂದುವರಿಕೆ | ಕೋಟ
ಮಂಗಳೂರು ಎಪ್ರಿಲ್ 23 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ಇರುವ ಲಾಕ್ ಡೌನ್ ಅನ್ನು ಮೇ 3 ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಸಲು ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯಸರಕಾರ ಈಗಾಗಲೇ ಎರಡೆರಡು ಬಾರಿ ಲಾಕ್ ಡೌನ್ ಸಡಿಲಿಕೆ ಘೋಷಿಸಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಲಾಕ್ ಡೌನ್ ಸಡಿಲಿಸದ ನಿರಾಳತೆ ಯನ್ನೂ ಅನುಭವಿಸುವ ಭಾಗ್ಯವಿಲ್ಲ. ಯಾಕೆಂದರೆ ನಮ್ಮಲ್ಲಿ ಕೊರೋನಾದಿಂದಾಗಿ ಎರಡು ಸಾವು ಸಂಭವಿಸಿದೆ. ಬಂಟ್ವಾಳದ ಇಬ್ಬರು ಹಿರಿಯ ಮಹಿಳೆಯರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ.
ಅಲ್ಲದೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 7 ಸೀಲ್ ಡೌನ್ ಪ್ರದೇಶಗಳಿದ್ದು, ಆ ಹಿನ್ನೆಲೆಯಲ್ಲಿ ಕೂಡಾ ಲಾಕ್ ಡೌನ್ ಸಡಿಲಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಜಿಲ್ಲಾ ಆಡಳಿತ ಬಂದಿದೆ.
ಎಂದಿನಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲಿವೆ. ಉಳಿದ ಎಂದಿನಂತೆ ನಿರ್ಬಂಧಗಳು ಮುಂದುವರೆಯಲಿದೆ ಎಂದು ಉಸ್ತುವಾರಿ ಸಚಿವ ಕೋಟಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.