ಮೈಸೂರಿನಿಂದ ಮುಂಡೂರಿಗೆ ಆಗಮಿಸಿದ ವ್ಯಕ್ತಿ | ಸ್ಸ್ಥಳೀಯರಿಗೆ ಆತಂಕ

ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಬಾಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ರೆಡ್‌ಝೋನ್ ಮೈಸೂರಿನಿಂದ ಕೆಲದಿನಗಳ ಹಿಂದೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಯುವಕನಿಂದಾಗಿ ಇಡೀ ಮನೆಯವರನ್ನೇ ಕ್ವಾರಂಟೈನ್‌ಗೆ ಒಳಪಡಿಸಿದ ಘಟನೆ ಹಸಿರಾಗಿರುವಾಗಲೇ ಪುತ್ತೂರು ತಾಲೂಕಿನ ಮುಂಡೂರು ಗ್ರಾ.ಪಂ.ವ್ಯಾಪ್ತಿಗೆ ವ್ಯಕ್ತಿಯೋರ್ವರು ಮೈಸೂರಿನಿಂದ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂತರ್ಜಿಲ್ಲಾ ಗಡಿಯನ್ನು ದಾಡಿ ಬರಬೇಕಾದರೆ ಹಲವೆಡೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿಯೇ ಬರಬೇಕಾಗಿದೆ. ಆದರೂ ಮೈಸೂರಿನಿಂದ ಪುತ್ತೂರು ತಾಲೂಕಿನ ಮುಂಡೂರು ಗ್ರಾ.ಪಂ.ವ್ಯಾಪ್ತಿಯ ಮುಲಾರ್ ಎಂಬಲ್ಲಿಗೆ ವ್ಯಕ್ತಿಯೋರ್ವರು ತಮ್ಮ ಗೃಹಪ್ರವೇಶಕ್ಕೆ ಆಗಮಿಸಿದ್ದಾರೆ. ಇದು ಸ್ಥಳೀಯ ಜನರನ್ನು ಆತಂಕಕ್ಕೆ ಎಡೆಮಾಡಿದೆ.

ಕೆಲ ದಿನಗಳ ಹಿಂದೆ ಮೈಸೂರಿನಿಂದ ಸುಬ್ರಹ್ಮಣ್ಯಕ್ಕೆ ಬಂದ ವ್ಯಕ್ತಿಯಿಂದಾಗಿ ಮನೆ ಮಂದಿಗೆ ಕ್ವಾರಂಟೈನ್ನಲ್ಲಿ ಸೂಚಿಸಲಾಗಿತ್ತು. ಅಲ್ಲದೆ ಆತ ಕೆಲವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಮಾಡಲು ಸೂಚಿಸಲಾಗಿತ್ತು. ಅಲ್ಲದೆ ನಿನ್ನೆ ಉಪ್ಪಿನಂಗಡಿಯಿಂದ ಸುಳ್ಯಕ್ಕೆ ಆಗಮಿಸಿದ ವ್ಯಕ್ತಿಯೋರ್ವರನ್ನೂ ಕ್ವಾರಂಟೈನ್‌ನಲ್ಲಿರಲು ಆರೋಗ್ಯ ಇಲಾಖೆಯವರು ಸೂಚಿಸಿದ್ದಾರೆ.

ಆದರೂ ಮೈಸೂರಿನಿಂದ ಪುತ್ತೂರು ತಾಲೂಕಿನ ಮುಂಡೂರು ಗ್ರಾ.ಪಂ.ವ್ಯಾಪ್ತಿಗೆ ಬಂದ ವ್ಯಕ್ತಿಯ ಬಗ್ಗೆ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ವ್ಯಕ್ತಿ ಊರಿನ ಗ್ರಹಪ್ರವೇಶ ಒಂದಕ್ಕೆ ಬಂದಿದ್ದು, ಆದರೆ ಬರುವಾಗ ತುರ್ತು ಚಿಕಿತ್ಸೆಗೆ ಎಂದು ಅನುಮತಿ ಪತ್ರ ಪಡೆದು ಬಂದಿದ್ದಾರೆ ಎನ್ನಲಾಗಿದೆ. ಮುಂದುವರಿದ ಮನೆಗೆ ವೀಏ, ಪಿಡಿಓ ಮತ್ತು ಸಿಡಿಪಿಓ ಅವರು ಭೇಟಿ ನೀಡಿದ್ದರೂ ಯಾರನ್ನೂ ಕ್ವಾರಂಟೈನ್ ಗೆ ಒಳಪಡಿಸಿಲ್ಲ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ.

ಇಂತಹ ವಿಷಮ‌ ಪರಿಸ್ಥಿತಿಯಲ್ಲೂ ಯಾಕಾಗಿ ಸರಕಾರ ಹಾಗೂ ಜಿಲ್ಲಾಡಳಿತದ ಸೂಚನೆಯನ್ನು ಧಿಕ್ಕರಿಸಿ ಆಗಮಿಸುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

Leave A Reply

Your email address will not be published.