ದಕ್ಷಿಣ ಕನ್ನಡದಲ್ಲಿ ಕೋರೋನಾಗೆ ಮತ್ತೊಂದು ಬಲಿ, ಬಂಟ್ವಾಳದ ವೃದ್ದೆ

ಮಂಗಳೂರು, ಎ.23. ಕರಾವಳಿಯಲ್ಲಿ ಇಂದು ಗುರುವಾರದಂದು ಪತ್ತೆಯಾದ ಮತ್ತೊಂದು ಕೊರೋನಾ ಪಾಸಿಟಿವ್ ರೋಗಿ ತೀರಿಕೊಂಡಿದ್ದಾರೆ.

ಮೊನ್ನೆ ಮೃತಳಾದ ಬಂಟ್ವಾಳದ ಮಹಿಳೆಯ ಸಂಬಂಧಿಯಾದ 75 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿತ್ತು.

ಈಕೆ ಪಾರ್ಶ್ವವಾಯುಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದೇ ಕೊರೋನಾ ಪಾಸಿಟೀವ್ ಇರುವುದು ಖಚಿತ ವಾಗಿತ್ತು. ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದ ದಿನವೇ ಆಕೆ ಮೃತಪಟ್ಟಿದ್ದಾಳೆ.

ದಕ್ಷಿಣ ಕನ್ನಡದಲ್ಲಿ ಒಟ್ಟು 17 ಕೋರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ, ಬಂಟ್ವಾಳದ 50 ವರ್ಷ ವಯಸ್ಸಿನ ಓರ್ವ ಮಹಿಳೆ ,ಹಾಗೂ ಅವರ ಸಂಬಂದಿ ಮಹಿಳೆ ಸಾವನ್ನಪ್ಪಿದ್ದಾರೆ. ಒಟ್ಟು 3 ಚಿಕಿತ್ಸೆಯಲ್ಲಿದ್ದಾರೆ. ಒಟ್ಟು 12 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Leave A Reply

Your email address will not be published.