ಸುಬ್ರಮಣ್ಯ | ನರ್ಸಿಂಗ್ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಆತ್ಮಹತ್ಯೆಗೆ ಯತ್ನಿಸಿದ ಕಡಬ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದ ನಿವಾಸಿ ವಿದ್ಯಾ (20) ಬಂದ್ಯಡ್ಕ ಅವರು ಮೂರು ದಿನಗಳ ಹಿಂದೆ ವಿಷ ಸೇವಿಸಿ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಆಕೆಯ ಜೀವ ಕೊನೆಗೂ ಉಳಿಯಲಿಲ್ಲ.

ಮಂಗಳೂರಿನಲ್ಲಿ ನರ್ಸಿಂಗ್‌ ಮಾಡುತ್ತಿದ್ದ ಯುವತಿ ಇತ್ತೀಚೆಗೆ ಊರಿಗೆ ಬಂದಿದ್ದು ಮೂರು ದಿನದ ಹಿಂದೆ ಮನೆಯಲ್ಲಿ ದೊರೆತ ಇಲಿ ಪಾಷಾಣ ಸೇವಿಸಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ಮನೆಯವರು ಮೊದಲು ಆಕೆಯನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಆದರೆ ಅಲ್ಲಿ ಆಗುವುದಿಲ್ಲ ಎಂದು ಸುಳ್ಯದ ವೈದ್ಯರು ತಿಳಿಸಿದ ಮೇಲೆ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಅಲ್ಲಿ ಆಕೆ ಇಂದು, ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.

ಮೃತರು ವೆಂಕಟ್ರಮಣ ಅವರ ಪುತ್ರಿಯಾಗಿದ್ದು ತಾಯಿ, ಸಹೋದರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Leave A Reply

Your email address will not be published.