ಬೆಳ್ಳಾರೆ ಪೊಲೀಸರ ಮೇಲೆ ಸಾವಿರ ರೂ.,ಊರ ಕೋಳಿ ಕೇಳಿದ ಆರೋಪ | ಮೂವರ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಲಾಕ್ ಡೌನ್ ಸಮಯದಲ್ಲಿ ಮದ್ದಿಗೆ ಬಂದ ವ್ಯಕ್ತಿಯ ವಾಹನಕ್ಕೆ ಬೆಳ್ಳಾರೆ ಪೊಲೀಸರು ದಂಡ ಹಾಕಿದ್ದಲ್ಲದೆ ಊರ ಕೋಳಿ ಕೇಳಿದ್ದಾರೆ ಎಂದು ಖಾಸಗಿ ವೆಬ್‌ಸೈಟ್ ವಾಹಿನಿಗೆ ವರದಿ ಕಳುಹಿಸಿ ಪ್ರಸಾರಮಾಡಲು ಕಾರಣರಾಗಿದ್ದಾರೆಂದು ಮೂವರ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಂದರ ಕಾಪುತ್ತಡ್ಕ,ಪ್ರದೀಪ ಮತ್ತು ಪ್ರಶಾಂತ ರೈ ಮರುವಂಜ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಸುಳ್ಳು ಆರೋಪಗಳನ್ನು ಒಳಗೊಂಡ ಹೇಳಿಕೆಯನ್ನು ಖಾಸಗಿ ವೆಬ್ ಸೈಟ್ ವಾಹಿನಿಗೆ ಕಳುಹಿಸಿ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿಸಿ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವೈಮನಸ್ಸು ಉಂಟುಮಾಡಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆಂದು ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.