ಗದಗಿನ ಶಾಸಕ ಎಚ್.ಕೆ.ಪಾಟೀಲ್ ನಡೆ | ಜನತೆ ಹಿತ ಕಾಪಾಡಲು ಪ್ರಯತ್ನ ಪ್ರಶಂಸದಾಯಕ

ದೇಶಾದ್ಯಂತ ಕರೋನ ಮಹಾಮಾರಿಯಿಂದ ಜನರು ಲಾಕ್ ಡೋನ್ ಅಚರಣಿ ಮಾಡುವದು ಅನಿವಾರ್ಯ ವಾಗಿದೆ.ಸಾಮಾನ್ಯ ಜನತೆ ಬದುಕು ಆರ್ಥಿಕ ವಾಗಿ ಸಾಮಜಿಕವಾಗಿ ಅಲ್ಲೋಕಲ್ಲೋಲವಾಗಿದೆ.

ಇಂತಂಹ ಪರಿಸ್ಥಿತಿಯಲ್ಲಿ ಜನತೆಗೆ ಕಾಯು ದೇವರೆ ಕೈಕೂಟ್ಟು ಪರಿಸ್ಥಿತಿಯಲ್ಲಿ ನಮಗೆ ಸಹಾಯಕ್ಕೆ ಬರಬೇಕಾದವರು ರಾಜಕಾರಣಿಗಳು.

ಇತಂಹ ಸಂದರ್ಭದಲ್ಲಿ ನಮ್ಮ ಪಕ್ಷ ಮತ್ತು ನಮಗೆ ಅಧಿಕಾರ ಇಲ್ಲವೇಂದು ಕೈಕಟ್ಟಿಕುಳಿತುಕೋಳ್ಳದೆ…ಸನ್ಮಾನ್ಯ ಎಚ್.ಕೆ.ಪಾಟೀಲರು ಪಕ್ಷಬೇದ ಮರೆತು ಸರ್ಕಾರಕ್ಕೆ ಜನತೆಯ ಒಳಿತಿಗಾಗಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಾಗಿ ಸನ್ಮಾನ್ಯ ಮುಖ್ಯಮಂತ್ರಿ ಗಳಿಗೆ,ಹಾಗೂ ಆರೋಗ್ಯ ಸಚಿವರಿಗೆ ಪತ್ರದ ಮುಖೇನ ಹಾಗೂ ಮೌಖಿಕವಾಗಿ ಸಲಹೆಸೂಚನೆಗಳು ನೀಡುತ್ತಾ ಸರ್ಕಾರದ ತಪ್ಪು ಹೆಜ್ಜೆಗಳನ್ನು ಸರ್ಕಾರಕ್ಕೆ ಮನವರಿಕೆ ಆಗುವರೀತಿ ಎಚ್ಚರಿಕೆ ನೀಡುತ್ತಾ ಬಂದಿರುತ್ತಾರೆ.

ರಾಜ್ಯದಲ್ಲಿ,ಇಂತಹ ಹಲವಾರು ಸಂದರ್ಭದಲ್ಲಿಯೂ ಹಿರಿಯ ಮುತ್ಸದ್ದಿಯಾಗಿ ಕಾರ್ಯ ಮಾಡುತ್ತಿರುವದು ತಮ್ಮ ಅನುಭವವನ್ನು ಹಂಚಿಕೆ ಮಾಡುತ್ತಾ ಬಂದಿರುತ್ತಾರೆ.

ರಾಜ್ಯದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.ಕರೋನ ರೋಗ ರಾಜ್ಯದ ಉದ್ದಗಲಕ್ಕೂ ಹರಡು ಸಂದರ್ಭದಲ್ಲಿ ಗದಗ ಜನತೆಗಾಗಿ ವಿಧಾನಸಭೆ ಕಲಾಪ ಮುಗಿಸಿಕೊಂಡು ಸೀದಾ ಗದಗ ಮತಕ್ಷೇತ್ರಕ್ಕೆ ಬಂದು ಅವಿರತವಾದ ಕಾರ್ಯದಿಂದ ಬೇಸರಗೂಳ್ಳದೆ ವಿಶ್ರಾಂತಿ ತೆಗೆದುಕೊಳ್ಳದೆ ಗದಗ ಜನತೆಗಾಗಿ ಗದಗ ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿ,ರಾಜಕೀಯ ನಾಯಕರು ಹಲವಾರು ಸಮಾಜ ಚಿಂರಕರು ಸಂಘ ಸಂಸ್ಥೆಗಳು ಚರ್ಚಿಸಿ ಗದಗ ಜಿಲ್ಲೆಯಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದಕೂಳ್ಳಲು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಗಳನ್ನು ನಡೆಸಿದರು.

ಗದಗ ಮತಕ್ಷೇತ್ರ ಬಡವರಿಗೆ ಆಶ್ರಯ ಯೋಜನೆ ವಾಸಿಸುತ್ತಿರು ಜನತಗೆ ಉಚಿತ ಮಾಸ್ಕ್ ವಿತರಣಿ ಕಾರ್ಯ ತಮ್ಮ ಮುಂದಾಳತ್ವದಲ್ಲಿ ಚಾಲನೆ ನೀಡಿದರು.

ಗದಗ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೂ ಉಚಿತ ಮಾಸ್ಕ ವಿತರಣಿ ಮಾಡಲು ಜಿಲ್ಲಾ ಪಂಚಾಯತ ಅಧ್ಯಕ್ಷ ರಾದ ಕು.ಸಿದ್ಧು.ಪಾಟೀಲ ಮಾರ್ಗದರ್ಶನ ಮಾಡಿ ವಿತರಣಿ ಮಾಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಡಳಿತದೋಂದಿಗೆ ಸ್ನೇಹಮಯ ಸಲಹೆ,ಸೂಚನೆಮಾರ್ಗದರ್ಶನ ಮಾಡುತ್ತಾ ಗದಗ ಜಿಲ್ಲೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಗದಗ ಜಿಲ್ಲೆಯ ಹಲವಾರು ಜನತೆ ದುಡಿಮೆಗಾಗಿ ದೂರದ ಗೋವಾದಲ್ಲಿ ಕಷ್ಟಪಡುತ್ತಿರುವ ಗಮನಿಸಿ ಮಾನ್ಯ ಮುಖ್ಯ ಮಂತ್ರಿ ಗಳಿಗೆ ಪತ್ರದ ಮುಖಾಂತರ ಅವರಿಗೆ ಕರೆಸಿಕೊಳ್ಳುವ ,ಮೂಲಭೂತ ಸೌಲಭ್ಯ ಗೋವಾ ಸರಕಾರದಿಂದ ಕೊಡಿಸಿ ಕೋರಿದರು.

ಗದಗ ಜಿಲ್ಲೆಯ ಗೋವಾದಲ್ಲಿ ದುಡಿತಿರುವ ನಮ್ಮವರಿಗೆ ಗದಗನಿಂದ ಎರಡು ಲಾರಿಗಳ ಮೂಲಕ ಕಾಳು ದಿನಸಿ ,ಕಾಯಿಪಲ್ಯ, ತಲುಪಿಸುವ ವ್ಯವಸ್ಥೆ ಮಾಡಿದರು ಗದಗ ಮತಕ್ಷೇತ್ರದ ಸುಮಾರು ೫೦೦೦ಕ್ಕೂ ಹೆಚ್ಚಿನ ಕುಟುಂಬಕ್ಕೆ ಕಾಳುದಿನಸಿ,ಕಾಯಿಪಲ್ಯ,ಕಿಟ್ ನೀಡುವ ಕಾರ್ಯ ಚಾಲನೆಯಲ್ಲಿದೆ.

ಗದಗ ಜಿಲ್ಲೆಯ ಹಲವಾರು ನುರಿತ ವೈದ್ಯರ ತಂಡದ ಸಲಹೆಗಳನ್ನು ತೆಗೆದುಕೊಂಡು ಡಾ.ಪವನ ಪಾಟೀಲ ಮುಂಚುಣೆಯಲ್ಲಿ ಸ್ಥಳೀಯ ಟೇಲರವರ ಸಹಾಯದಿಂದ ಗದಗದಲ್ಲಿಯೇ ಪಿ.ಪಿ.ಇ ಕಿಟ್ ನ್ನು ತಯಾರಿಸಲು ಮುನ್ನುಡಿ ಬರೆದರು. ಗದಗ ದಲ್ಲಿ ಕರೋನ್ ಸೋಂಕಿತೆ ಎಂದು ಪತ್ತೆಯಾದಗಿನಿಂದ ಸರ್ಕಾರಕ್ಕೆ ಕರೋನಾ ಪರೀಕ್ಷೆ ಮಾಡುವ ಪ್ರಯೋಗಾಲಯ ಜಿಲ್ಲೆಗೆ ಒಂದರಂತೆ ಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಅದರ ಫಲಶೃತಿಯಿಂದಾಗಿ ಗದಗ ಜಿಲ್ಲೆಯಗೆ ಕರೋನ ಪರೀಕ್ಷೆಯ ಪ್ರಯೋಗಾಲಯ ಬಂದಿತು. ಗದುಗಿನ ಇನ್ನೂ ಹಲವಾರು ಕರೋನ ,ನೆರೆಹಾವಳಿಗೆ ಗದಗ ಜನತೆಯ ಕ್ಲಿಷ್ಟಕರವಾದ ಸಂದರ್ಭದಲ್ಲಿ ಸದಾ ನಿಮ್ಮೋಂದಿಗೆ ಇದ್ದವರೇ ಹಗಲು ರಾತ್ರಿ ಎನ್ನದೆ ಗದಗ ಜಿಲ್ಲೆಯ ಜನತೆಗಾಗಿ ರಾಜ್ಯದ ಜನತೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಹಲವಾರು ರಾಜಕಾರಣಿಗಳಿಗೆ ಮಾದರಿಯಾಗಿದ್ದರೆ ಅದೇ ರೀತಿ ಸನ್ಮಾನ ಎಚ್.ಕೆ.ಪಾಟೀಲ ರಿಗೆ ಅವರ ಹಿರಿಯ ಸಹೋದರರಾದ ಮಾಜಿ ಶಾಸಕರು ಸಂತ ರಾಜಕಾರಣಿಗಳಾದ ಡಿ.ಆರ್.ಪಾಟೀಲರವರು ಎಚ್.ಕೆ.ಪಾಟೀಲ ರವರ ಜನಕಲ್ಯಾಣ ಕಾರ್ಯಕ್ಕೆ ಸಾಥ್ ನೀಡುತ್ತಾ ಜನರ ಕಷ್ಟ ದಲ್ಲಿ ನಾವು ಸದಾಕಾಲ ಭಾಗಿ ಎಂದು ನುಡಿದಂತೆ ಕಂಡು ಬರುತ್ತಿದೆ.

ರಾಜ್ಯದ ಎಲ್ಲಾ ರಾಜಕಾರಣಿಗಳು ಈ ಮಾದರಿಯಂತೆ ಕಾರ್ಯ ಮಾಡಿದರೆ ಜನಮಾನಸದಲ್ಲಿ ಎಂದು ಅಚ್ಚಳಿಯದೆ ಉಳಿಯುವಂತೆ ಕಾರ್ಯಮಾಡಿರಿ…

ಚನ್ನಾರಡ್ಡಿ.ಬಸವರಾಜ.ಗೂಳರಡ್ಡಿ ವಕೀಲರು ಗದಗ 9164470005

Leave A Reply

Your email address will not be published.