ಬಂಟ್ವಾಳ ಕೊರೊನಾದಿಂದ ಮೃತಪಟ್ಟ ಮಹಿಳೆಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ KPME ಕಾಯ್ದೆಯಂತೆ ಪ್ರಕರಣ ದಾಖಲು

ಮಂಗಳೂರು : ದಿನಾಂಕ 19-04-2020 ರಂದು ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಮಹಿಳೆಯೊಬ್ಬರು ಕೋವಿಡ್ -19 ಕೋರೋನ ಸೊಂಕು ಖಾಯಿಲೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು ಮೃತಪಟ್ಟಿದ್ದು, ಈ ಬಗ್ಗೆ ಪಿರ್ಯಾಧಿದಾರರು ಮೃತರ ಗಂಡ ಮತ್ತು ಮಗನನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದಲ್ಲಿ ಮೃತರ ಗಂಡ ಮತ್ತು ಮಗ ಮೃತ ಮಹಿಳೆಯೊಂದಿಗೆ ಎಲ್ಲಿ ಪ್ರಯಾಣಿಸಿದ್ದಿರಿ ಎಂಬ ಬಗ್ಗೆ ವಿಚಾರಿಸಿದಾಗ ಮೃತ ಮಹಿಳೆ ನಿಮೋನಿಯ (ಶ್ವಾಸಕೋಶದ) ಖಾಯಿಲೆಯಿಂದ ಬಳಲುತ್ತಿದ್ದು. ಅವರಿಗೆ ಅನೇಕ ಕಡೆ ಚಿಕಿತ್ಸೆ ಕೊಡಿಸಿದರೂ ನಿಮೋನಿಯ ಖಾಯಿಲೆಯಿಂದ ಗುಣ ಮುಖವಾಗದೆ ಇದ್ದು, 15-04-2020 ರಂದು ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಡಾ| ಸದಾಶಿವ ಶೆಣೈ ನವದುರ್ಗಾ ಕ್ಲಿನಿಕ್ ಕರೆದುಕೊಂಡು ಹೋಗಿರುತ್ತೇವೆ ಎಂದು ತಿಳಿಸಿರುತ್ತಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಸದ್ರಿ ಡಾ|ಸದಾಶಿವ ಶೆಣೈ ರವರು ಕೆ.ಪಿ.ಎಮ್.ಇ ಕಾಯ್ದೆ ಪ್ರಕಾರ ಎಲ್ಲಾ ಸಾಂಕ್ರಾಮಿಕ ಖಾಯಿಲೆಗಳನ್ನು ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ನೀಡಬೇಕಾಗಿದ್ದು. ಸದ್ರಿ ಡಾ. ಸದಾಶಿವ ಶೈಣೈ ರವರು ನಾಲ್ಕು ದಿನಗಳ ಚಿಕಿತ್ಸೆಯನ್ನು ನೀಡಿ ರೋಗ ಉಲ್ಬಣಗೊಂಡರು ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ನಿರ್ದೆಶನ ನೀಡಿರುವುದಿಲ್ಲ.


Ad Widget

ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿರುತ್ತಾರೆ. ದೇಶದಾದ್ಯಂತ ತುರ್ತು ಘೋಷಿಸಿ ಪ್ರಾಣ ನಿರೋಧಕ ನಿರ್ಭಂಧದ ನಿಯಮವೆಂದು ತಿಳಿದು ಕೂಡ ಜವಾಬ್ದಾರಿಯುತ ವೈಧ್ಯಾಧಿಕಾರಿಯಾಗಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡದೆ ವೈಧ್ಯಕೀಯ ಸೇವೆಯಲ್ಲಿ ಕೋವಿಂಡ್ -19 ಕೋರೋನ ಸೋಂಕು ಹರಡುವಿಕೆಯಲ್ಲಿ ನಿರ್ಲಕ್ಷ್ಯತನ ವಹಿಸಿದ್ದರಿಂದ ಸದರಿ‌ ಮಹಿಳೆಯು ಕೋವಿಂಡ್ 19 ಕೋರೋನ ಸೊಂಕಿನಿಂದ ಮೃತಪಡುವರೇ ಕಾರಣವಾಗಿದ್ದು,ಅದ್ದುದರಿಂದ ಕೋವಿಂಡ್ -19 ಕೋರೋನ ಸೋಂಕು ಸಾಂಕ್ರಮಿಕ ಖಾಯಿಲೆ ಹರಡುವಿಕೆಯಲ್ಲಿ ನಿರ್ಲಕ್ಷ್ಯತನ ವಹಿಸಿದ ನವದುರ್ಗಾ ಕ್ಲಿನಿಕ್ ನ ಡಾ.ಸದಾಶಿವ ಶೆಣೈರವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 20.04.2020 ರಂದು ತಾಲೂಕು ಆರೋಗ್ಯಧಿಕಾರಿಗಳು ಬಂಟ್ವಾಳ ತಾಲೂಕುರವರು ನೀಡಿದ ದೂರಿನಂತೆ ಕಲಂ : 269, 270, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

error: Content is protected !!
Scroll to Top
%d bloggers like this: