ಲಾಕ್‌ಡೌನ್ | ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಸ್ಪರ್ಧೆಗಳು
ಮುಕ್ಕೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಮುಕ್ಕೂರು-ಕುಂಡಡ್ಕ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ. ಕೊರೊನಾ ರೋಗ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಪ್ರಕ್ರಿಯೆಗೆ ನಾವೆಲ್ಲಾ ಬೆಂಬಲವಾಗಿ ನಿಂತು ನಮ್ಮ ನಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲು ಉದ್ದೇಶಿಸಿಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಮನೆಯಿಂದಲೆ ವಾಟ್ಸಪ್ ಮೂಲಕ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಎ.28 ರೊಳಗೆ ಕಳುಹಿಸಬೇಕು. ?
*ವಿಭಾಗ ಮತ್ತು ಸ್ಪರ್ಧೆ*?
?1. ಕಿರಿಯ ಪ್ರಾಥಮಿಕ-(1ರಿಂದ 4 ನೇ ತರಗತಿ) ಪ್ರಕೃತಿ ಚಿತ್ರ. A4 ಅಳತೆಯಲ್ಲಿರಬೇಕು
?2. ಹಿರಿಯ ಪ್ರಾಥಮಿಕ-(5 ರಿಂದ 7 ನೇ ತರಗತಿ) ಕೊರೊನಾ ಪರಿಣಾಮದ ಚಿತ್ರ. A4 ಅಳತೆಯಲ್ಲಿರಬೇಕು. ?3. ಹೈಸ್ಕೂಲ್ ವಿಭಾಗ (8 ರಿಂದ 10ನೇ ತರಗತಿ)
ಪ್ರಬಂಧ ವಿಷಯ : ‘ಕೊರೋನಾ ಜಾಗೃತಿ’ 150 ಪದಗಳ ಮಿತಿ
4. ಕಾಲೇಜು ವಿಭಾಗ ( ಪಿಯುಸಿ ಮತ್ತು ಪದವಿ) ಪ್ರಬಂಧ ವಿಷಯ: ‘ತುಳು ನಾಡಿನ ಸಾಂಸ್ಕೃತಿಕ ಆಚರಣೆಗಳು ಮತ್ತು ಮಹತ್ವ’ (200ಪದಗಳ ಮಿತಿ)
ನಿಯಮಗಳು: ?
ಚಿತ್ರ ಮತ್ತು ಪ್ರಬಂಧ ರಚನೆಯಲ್ಲಿ ಸಂಪೂರ್ಣವಾಗಿ ಮಕ್ಕಳ ಸೃಜನಾತ್ಮಕತೆ ಮಾತ್ರ ಇರಬೇಕು. ಪೋಷಕರ ಪಾಲ್ಗೊಳ್ಳುವಿಕೆ ಅನುಮಾನ ಬಂದರೆ ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ ಮತ್ತು ಮುಂದೆ ನಡೆಸಲ್ಪಡುವ ಸ್ಪರ್ಧೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ?ಚಿತ್ರ ಮತ್ತು ಪ್ರಬಂಧ ರಚನೆ ಮಾಡಿದ ಹಾಳೆಯ ಬಲ ಬದಿಯ ಮೇಲ್ಭಾಗದಲ್ಲಿ ಮಗುವಿನ ಹೆಸರು, ತರಗತಿ, ಮತ್ತು ಮನೆಯ ಸಂಪೂರ್ಣ ವಿಳಾಸ ಮತ್ತು ಹೆತ್ತವರ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸತಕ್ಕದ್ದು. ?ಒಂದು ವಾಟ್ಸಾಪ್ ಸಂಖ್ಯೆಯಿಂದ ಎಷ್ಟು ಮಕ್ಕಳ ಚಿತ್ರ ಮತ್ತು ಪ್ರಬಂಧಗಳನ್ನು ಬೇಕಾದರೂ ಕಳುಹಿಸಬಹುದು ಆದರೆ ಒಂದು ಮಗುವಿಗೆ ಒಂದೇ ಅವಕಾಶ. ?ಸಂಘದ ವತಿಯಿಂದ ಮುಂದೆ ನಡೆಸಲ್ಪಡುವ ಕಾರ್ಯಕ್ರಮದ ದಿನದಂದು ವಿಜೇತರಿಗೆ ವಿಭಾಗವಾರು ಬಹುಮಾನ ಮತ್ತು ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಲಾಗುವುದು. ?ಚಿತ್ರ ಮತ್ತು ಪ್ರಬಂಧದ (ಬಿಳಿ ಹಾಳೆಯಲ್ಲಿನ ಬರಹ) ಪೋಟೋ ಓದುವ ಹಾಗೆ ಇರಬೇಕು. ಬ್ಲರ್ ಅಥವಾ ಓರೆ-ಕೋರೆ ಇರುವ ಪೋಟೋಗಳನ್ನು ಸ್ಪರ್ಧಗೆ ಪರಿಗಣಿಸುವುದಿಲ್ಲ.
?ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ?ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನವರಿಗೆ ಮಾತ್ರ ಅವಕಾಶ. ?
ಚಿತ್ರ ಮತ್ತು ಪ್ರಬಂಧದ ಫೋಟೋ ವಾಟ್ಸಾಪ್ ಮಾಡಲು 28 ಎಪ್ರಿಲ್ 2020 ಕಡೆಯ ದಿನಾಂಕವಾಗಿರುತ್ತದೆ. ?ಚಿತ್ರ ಮತ್ತು ಪ್ರಬಂಧದ ಫೋಟೋ ವಾಟ್ಸಾಪ್ ಮಾಡಬೇಕಾದ ನಂಬರ್ 9945817372 ?ಯಾವುದೇ ಕರೆ ಅಥವಾ ಮೆಸೇಜ್ ಗೆ ಅವಕಾಶ ಇಲ್ಲ.
Comments are closed.