ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಅವೀನ್ ಆಕಾಶ್ ಫ್ರಾಂಕೋ ನಿಧನ

ಸಬರಬೈಲು: ಬೆಳ್ತಂಗಡಿಯ ಸಬರಬೈಲು ನಿವಾಸಿಯಾಗಿರುವ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ ಅವೀನ್ ಆಕಾಶ್ ಫ್ರಾಂಕೋ (35ವ) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಇವರು ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಮಾಲಕ ಮತ್ತು ಎಸ್.ಡಿ.ಪಿ.ಐ ನ ರಾಷ್ಟ್ರೀಯ ಕಾರ್ಯದರ್ಶಿ ಯು ಆಗಿರುವ ಅಲ್ಫಾನ್ಸೋ ಪ್ರಾಂಕೋ ಮತ್ತು ಎಲಿಜಾ ಫ್ರಾಂಕೋ ಅವರ ಪುತ್ರರಾಗಿದ್ದಾರೆ.

ಚಿಕ್ಕವಯಸ್ಸಿನಲ್ಲೇ ನಡೆದ ಅವರ ಅಕಾಲಿಕ ಮರಣಕ್ಕೆ ಅವರ ಬಂಧು ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.