ಸುಳ್ಯ | ಕಾರ್ಮಿಕರಿಗೆ ಭೋಜನ ವ್ಯವಸ್ಥೆ ಮಾಡಿದ ಸದಸ್ಯರ ಸಭೆ
ವರದಿ : ಹಸೈನಾರ್ ಜಯನಗರ
ಅಸಂಘಟಿತ ಕೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ, ಭಾರತದ ಲಾಕ್ ಡೌನ್ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ಭೋಜನ ವ್ಯವಸ್ಥೆ ಕಲ್ಪಿಸುತ್ತಿರುವ ಆಯೋಜಕರ ಸಭೆ ಏಪ್ರಿಲ್ 16 ರಂದು ಸುಳ್ಯ ಶಿವಕೃಪ ಕಲಾಮಂದಿರದಲ್ಲಿ ನಡೆಯಿತು.
ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ ಸುಳ್ಯ, ತಾಲೂಕು ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ಇದರ ಗೌರವಾಧ್ಯಕ್ಷ ಕೆ.ಪಿ. ಜೋನಿ ನಾಗರಾಜ ಮೇಸ್ತ್ರಿ ಜಯನಗರ, ಬಿಜು ಮೇಸ್ತ್ರಿ ,ನೆಲ್ಸನ್ ಹಳೆಗೇಟು, ಸಭೆಯ ನೇತೃತ್ವವನ್ನು ವಹಿಸಿದ್ದರು.
ಕಳೆದ ಹದಿನೇಳು ದಿನಗಳಿಂದ ನಿರಂತರ ಭೋಜನ ವ್ಯವಸ್ಥೆ ಸುಮಾರು 800 ಕ್ಕೂ ಹೆಚ್ಚು ಕಾರ್ಮಿಕರಿಗೆ ನೀಡುತ್ತಿದ್ದು ಈ ದಿನಗಳಲ್ಲಿ ಬಂದ ಜಮಾ ಮತ್ತು ಖರ್ಚಿನ ವಿವರವನ್ನು ಕಾರ್ಮಿಕ ಮುಖಂಡರಾದ ಬಿಜು ಮೇಸ್ತ್ರಿ ಮಂಡಿಸಿದರು.
ಇಲ್ಲಿಯವರೆಗೆ ಸುಮಾರು 20,014 ಭೋಜನವನ್ನು ನೀಡಲಾಗಿದೆ. ಇಲ್ಲಿಯವರೆಗೆ 375243 ರೂಪಾಯಿಗಳು ಜಮಾ ಆಗಿದ್ದು 320148 ರೂಪಾಯಿಗಳು ಖರ್ಚುಗಳು, ಕಳೆದು 55095 ರೂಗಳು ಉಳಿಕೆಯಾಗಿರುತ್ತದೆ ಎಂದು ತಿಳಿಸಿದರು. ಏಪ್ರಿಲ್ 21ರ ತನಕ ಭೋಜನ ವ್ಯವಸ್ಥೆಯನ್ನು ಮುಂದುವರಿಸಲು ಹಾಗೂ ಈಗಾಗಲೇ ನೀಡುತ್ತಿರುವ ಫಲಾನುಭವಿಗಳ ಸಮೀಕ್ಷೆ ನಡೆಸಿ ಮುಂದಿನ ದಿನಗಳಲ್ಲಿ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ನಂತರ ಲಾಕ್ ಡೌನ್ ಮುಂದುವರಿದದ್ದೇ ಆದಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭೋಜನ ವ್ಯವಸ್ಥೆಯಲ್ಲಿ ಸಹಕರಿಸುತ್ತಿರುವ ವಿಜಯ ಮೇಸ್ತ್ರಿ ,ಜಗದೀಶ್ ಮೇಸ್ತ್ರಿ, ಶಿಲ್ಪಾ ಆಚಾರ್ಯ, ಶಿವರಾಮಗೌಡ, ಕೃಷ್ಣ ಕೇರ್ಪಳ ,ಇಸಾಕ್ ಸುಳ್ಯ, ನಾಗರಾಜ ಕಲ್ಲುಮುಟ್ಲು ,ವೆಂಕಟೇಶ ನಾವಿ, ಶ್ರೀಧರ ಕಲ್ಲುಗುಂಡಿ, ಶರೀಫ್ ಕಂಠಿ, ಹನೀಫ್ ಜಯನಗರ, ಉಸ್ಮಾನ್ ಜಯನಗರ, ಹಸೈನಾರ್ ಜಯನಗರ , ಮಲ್ಲೇಶ್ ಬೆಟ್ಟಂಪಾಡಿ ,ದುರ್ಗಾ ಮೇಸ್ತ್ರಿ ಬಳ್ಳಾರಿ ,ಮಂಜುನಾಥ ಬಳ್ಳಾರಿ ಕನ್ಸ್ಟ್ರಕ್ಷನ್ ,ಮೋಹನಪ್ಪ ,ವೆಂಕಟೇಶ್ ಬಟ್ ,ವಿಲ್ಸನ್ ಮೇಸ್ತ್ರಿ ಗಣೇಶ್ ಪೇರಾಲು , ಸುಬ್ರಮಣ್ಯ ಕಲ್ಲುಮುಟ್ಲು, ಮೊದಲಾದವರು ಉಪಸ್ಥಿತರಿದ್ದರು.
Comments are closed.