ಜತೆಗೇ ಕೂತು ಆಡುತ್ತಿದ್ದ ಗೆಳೆಯ ಕೆಮ್ಮಿದ ಎಂಬ ಕಾರಣಕ್ಕಾಗಿ ಗುಲ್ಲು ಗುಂಡು ಹಾರಿಸಿದ !

ನೋಯಿಡಾ : ತಾನು ಸ್ವತಃ ರೋಗಿಗಳನ್ನು ತನ್ನ ಬಲಿಷ್ಟ ಬಾಹುಗಳಿಂದ ಕುತ್ತಿಗೆಗೆ ಅಮುಕಿ ಹಿಡಿದು ಉಸಿರಾಟ ಸಮಸ್ಯೆ ತಂದೊಡ್ಡಿ ಕೊಲ್ಲುವ ಕೊರೋನಾ ಭಯಕ್ಕೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ ಗ್ರೇಟರ್ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಕೆಮ್ಮಿದ ಎಂಬ ಕಾರಣಕ್ಕಾಗಿ ಗುಂಡು ಹೊಡೆಸಿಕೊಂಡಿದ್ದಾನೆ.

ನೋಯ್ಡಾದಲ್ಲಿ ಲೂಡೋ ವಿಡಿಯೋ ಗೇಮ್ ಆಟ ಆಡುತ್ತಿದ್ದಾಗ ವ್ಯಕ್ತಿಯೊಬ್ಬ ಉದ್ದೇಶ ಪೂರ್ವಕವಾಗಿ ಕೆಮ್ಮುತ್ತಿದ್ದಾನೆ ಎಂಬ ಕಾರಣಕ್ಕೆ ಆರಂಭಗೊಂಡ ಜಗಳ ಗುಂಡು ಹಾರಿಸುವಿಕೆಯಲ್ಲಿ ಕೊನೆಗೊಂಡಿದೆ. ಅದೃಷ್ಟವಶಾತ್ ಕೆಮ್ಮಿದವ ಬಚಾವಾಗಿದ್ದಾನೆ.

ಮಂಗಳವಾರ ರಾತ್ರಿ ಜಾರ್ಬಾ ಪೊಲೀಸ್ ಠಾಣೆ ವ್ಯಾಪ್ತಿಯ ದಯಾನಗರ ದೇವಸ್ಥಾನದಲ್ಲಿ ವಠಾರದಲ್ಲಿ ಪ್ರಶಾಂತ್ ಸಿಂಗ್, ಪ್ರವೀಶ್ , ಜೈ ವೀರ್ ಸಿಂಗ್ ಎಂಬ ಮೂವರು ಸ್ನೇಹಿತರು ಕೂತು ವೀಡಿಯೋ ಗೇಮ್ ಆಡುತ್ತಿದ್ದರು. ಆಗ ಅಲ್ಲಿ ಗುಲ್ಲು ಎಂಬಾತ ಅವರದೇ ಗೆಳೆಯ ಬಂದಿದ್ದ. ಆ ನಾಲ್ವರೂ ದಯಾನಗರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ಆಟದ ಮಧ್ಯೆ ಪ್ರವೀಶ್ ಎಂಬಾತ ಒಮ್ಮೆ ಕೆಮ್ಮಿದ್ದಾನೆ. ಆಮತ್ತೆರಡು ಬಾರಿ ಆತ ಕೆಮ್ಮಿದ್ದಾನೆ. ಆತ ಉದ್ದೇಶ ಪೂರ್ವಕವಾಗಿ ಕೆಮ್ಮುತ್ತಿದ್ದಾನೆ ಎಂದು ಗುಲ್ಲು ಆತನ ಮೇಲೆ ಜಗಳ ತೆಗೆದಿದ್ದಾನೆ. ಬಹುಶಃ ಆನಂತರ ಕೂಡಾ ಪ್ರವೀಶ್ ಕೆಮ್ಮಿರಬೇಕು : ಜಗಳ ವಿಕೋಪಕ್ಕೆ ತಿರುಗಿ ತಾಳ್ಮೆ ಕಳೆದುಕೊಂಡ ಗುಲ್ಲು ತನ್ನ ಪಿಸ್ತೂಲ್ ನ ಟ್ರಿಗರ್ ಒತ್ತಿದ್ದಾನೆ. ಗುಂಡು ತಿಂದು ಪ್ರವೀಶ್ ನೆಲಕ್ಕೊರಗಿ ಬೀಳುತ್ತಿದ್ದಂತೆ ಉಳಿದ ಗೆಳೆಯರು ನಮಗೂ ಗುಂಡು ಬೀಳಬಹುದೆಂಬ ಭಯದಿಂದ ಓಡಿಹೋಗಿದ್ದಾರೆ. 

ಗುಂಡಿನ ದಾಳಿಗೆ ಒಳಗಾಗಿರುವ ಪ್ರವೀಶ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

Comments are closed.